ದಿನದ ಸುದ್ದಿ

ಡಿಪ್ರೆಶನ್‍ಗೆ ಜಾರಿದ ಲಾಲು ಪ್ರಸಾದ್

Published

on

ಸುದ್ದಿದಿನ ಡೆಸ್ಕ್: ಮೇವು ಹಗರಣದ ಆರೋಪದಲ್ಲಿ ರಾಂಚಿ ಜೈಲಿನಲ್ಲಿರುವ ಆರ್‍ಜೆಡಿ ಮುಖ್ಯಸ್ಥ ಲಾಲು ಪರಸಾದ್ ಯಾದವ್ ಅವರು ಖಿನ್ನತೆಗೆ ಜಾರಿದ್ದು, ಅವರು ರಾಜೇಂದ್ರ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ನಿರ್ದೇಶಕ ಆರ್‍ಕೆ ಶ್ರೀವತ್ಸವ್ ತಿಳಿಸಿದ್ದಾರೆ.
ರಿಮ್ಸ್ ಆಸ್ಪತ್ರೆಯ ವೈದ್ಯರು ಲಾಲು ಅವರಿಗೆ ಚಿಕಿತ್ಸೆ ನೀಡಿದ್ದು, ಸಮ್ಮರಿಯಲ್ಲಿ ಲಾಲು ಅವರು ಖಿನ್ನತೆಗೆ ಒಳಗಾಗಿರುವುದಾಗಿ ಬರೆದಿದ್ದಾರೆ.
ರಾಂಜಿ ಜೈಲಿನಲ್ಲಿ ಸೊಳ್ಳೆಗಳ ಕಾಟ, ನಾಯಿಗಳ ಕಿರುಚಾಟ, ಮೂಲ ಸೌಕರ್ಯಗಳ ಕೊರತೆ ಇರುವ ಕಾರಣ ಲಾಲು ಅವರಲ್ಲಿ ಖಿನ್ನತೆ ಕಾಣಿಸಿಕೊಂಡಿದೆ ಎಂದು ವೈದ್ಯರು ಷರಾ ಬರೆದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಚಿಕಿತ್ಸೆಗಾಗಿ ಲಾಲು ಅವರಿಗೆ ಜಾಮೀನು ನೀಡಲಾಗಿದ್ದು, ರಿಮ್ಸ್ ಆಸ್ಪತ್ರೆಯ ನೂರು ಕೊಠಡಿಗಳ ಕೋಣೆಯಲ್ಲಿ ದಾಖಲಾಗಿದ್ದಾರೆ. ಕುಟುಂಬ ವರ್ಗದವರ ಒಡನಾಟದಿಂದ ಸದ್ಯ ಅವರು ಚೇತರಿಸಿಕೊಂಡಿದ್ದು ಜೈಲಿನ ಪರಿಸರದಿಂದಾಗಿ ಅವರ ಮನಸಿನ ಮೇಲೆ ಘಾಸಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮೇವು ಹಗರಣ ಸಂಬಂಧ ಕೋರ್ಟ್ ಈಚೆಗೆ ನೀಡಿದ ಆದೇಶವೊಂದರಲ್ಲಿ ಲಾಲು ಅವರು ಜೈಲು ಸೇರಿದ್ದರು.

Leave a Reply

Your email address will not be published. Required fields are marked *

Trending

Exit mobile version