ದಿನದ ಸುದ್ದಿ

ಗಣೇಶ ವಿಸರ್ಜನೆ : ಪಟಾಕಿ ಹಚ್ಚುವ ವಿಷಯಕ್ಕೆ ಮಾತಿನ ಚಕಮಕಿ ; ಪೊಲೀಸರಿಂದ ಲಾಠಿ ಚಾರ್ಜ್

Published

on

ಸುದ್ದಿದಿನ, ಹಾಸನ : ಪಟಾಕಿ ಹಚ್ಚುವ ವಿಷಯಕ್ಕೆ ಯುವಕರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಮೆರವಣಿ ಗೆ ನಿರತರ ಯುವಕರ ಮೇಲೆ ಪೊಲೀಸರು ‌ಲಾಠಿ ಚಾರ್ಜ್ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ.

ಗಣಪತಿ‌ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಮತ್ತು ಹುಡುಗರ ನಡುವೆ ಮಾತಿನ ಚಕಮಕಿ ನಡೆದಿದೆ. ಪೋಲಿಸರು ಲಾಠಿ ಬೀಸುತ್ತಿದ್ದಂತೆ ಉತ್ಸವದ ಗಣಪತಿ ಅಲ್ಲೆ ಬಿಟ್ಟು ಚಲ್ಲಾಪಿಲ್ಲಿಯಾಗಿ ಓಡಿದ ಹುಡುಗರು. ಕೊನೆಗೆ ತಡ ರಾತ್ರಿ 2 ಗಂಟೆಗೆ ಪೊಲೀಸರಿಂದ ವಿಸರ್ಜನೆಯಾದ ಗಣಪತಿ. ಪೊಲೀಸರ ಈ ದೌರ್ಜನ್ಯ ಖಂಡಿಸಿ ತಡ ರಾತ್ರಿಯೇ ಸ್ಥಳೀಯರು ಪ್ರತಿಭಟನೆ ನಡೆಸಿದರು. ಕೊನೆಗೆ ಯುವಕರ ಮನವೊಲಿಸಿ ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version