ಕ್ರೀಡೆ

ಲಾಸನ್ನೆ ಡೈಮಂಡ್ ಲೀಗ್ ಕೂಟ; ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಐತಿಹಾಸಿಕ ಚಿನ್ನದ ಪದಕ

Published

on

ಸುದ್ದಿದಿನ ಡೆಸ್ಕ್ : ಲಾಸನ್ನೆ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಭಾರತದ ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅತ್ಯುತ್ತಮ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಗೆಲುವಿನೊಂದಿಗೆ ಭಾರತೀಯ ಕ್ರೀಡಾಪಟು ಸ್ವಿಜ್ಜರ್‌ಲ್ಯಾಂಡ್ ಜ್ಯೂರಿಚ್‌ನಲ್ಲಿ ಬರುವ ಸೆಪ್ಟೆಂಬರ್ 7 ಮತ್ತು 8ರಂದು ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಲ್ಲದೆ 2023ರ ವಿಶ್ವ ಚಾಂಪಿಯನ್ ಶಿಪ್‌ಗೂ ನೀರಜ್ ಚೋಪ್ರಾ ಪ್ರವೇಶ ಗಿಟ್ಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version