/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಸುಪ್ರೀಂ ಕೋರ್ಟ್ ಎದುರು ವಕೀಲನಿಂದ ಬೆತ್ತಲೆ ಪ್ರತಿಭಟನೆ

Published

on

ಸುದ್ದಿದಿನ,ನವದೆಹಲಿ : ಗೂಂಡಾಗಳು ತಮಗೆ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ, ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂಕೋರ್ಟ್ ಎದುರು ವಕೀಲರೊಬ್ಬರು ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

ಸಿ. ಎಂ. ಸ್ವಾಮಿ ಎನ್ನುವವರು ಪ್ರತಿಭಟನೆ ನಡೆಸಿದವರು. ಈ ಬಗ್ಗೆ ಮಾತನಾಡಿರುವ ಸ್ವಾಮಿ, ನಾನು ಸಾಮಾಜಿಕ ಕಾರ್ಯಕರ್ತ, ಮಧುರೈ ಜಿಲ್ಲಾ ಕೋರ್ಟ್ ನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವೆ. ಹಲವು ರೌಡಿಗಳಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಮನವಿ ಮಾಡಿದರು.

ಸೂಕ್ತ ರಕ್ಷಣೆ ಒದಗಿಸುವಂತೆ ಸುಪ್ರೀಂ ಕೋರ್ಟ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಸ್ವಾಮಿ ಮನವಿ ಮಾಡಿದ್ದರು. ಆದ್ರೆ ಅವರ ಮನವಿ ತಿರಸ್ಕರಿಸಲಾಗಿತ್ತು ಎನ್ನಲಾಗಿದೆ.

ಈ ಹಿನ್ನಲೆ ಸಿ. ಎಂ. ಸ್ವಾಮಿ ಸುಪ್ರೀಂ ಕೋರ್ಟ್ ಆವರಣದಲ್ಲಿನ ಮರದ ಕೆಳಗೆ ಬಟ್ಟೆ ಬಿಚ್ಚಿ. ಮನವಿ ಪತ್ರ ಕೈಯಲ್ಲಿ ಹಿಡಿದು” ಸಿಜೆಐ ದಯವಿಟ್ಟು ನನ್ನ ಮನವಿ ಆಲಿಸಿ” ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಬಟ್ಟೆ ಹಾಕಿಕೊಳ್ಳುವಂತೆ ಮನವೊಲಿಸಲು ಯತ್ನಿಸಿ ವಿಫಲರಾದ್ರು. ಕೊನೆಗೆ ಅವರನ್ನ ವಶಕ್ಕೆ ಪಡೆದು ಕರೆದೊಯ್ದದರು.

ಕೃಪೆ : ಜಾಗೃತಿ ನ್ಯೂಸ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version