ಸಿನಿ ಸುದ್ದಿ
ಬಿಡುಗಡೆಗೂ ಮುನ್ನವೇ ಫೇಸ್ ಬುಕ್ ಪೇಜಲ್ಲಿ ಲೀಕ್ ಆದ ‘ಕಾಲಾ’ ಸಿನೆಮಾ
ಸುದ್ದಿದಿನ ಡೆಸ್ಕ್: ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಾಲಾ’ ಸಿನಿಮಾಕ್ಕೆ ಯಾಕೋ ಕಾಲವೇ ಸರಿ ಇಲ್ಲದಂತಾಗಿದೆ. ಅನೇಕ ಎಡರು-ತೊಡರುಗಳನ್ನ ಎದುರಿಸಿದ ನಂತರ ಇನ್ನೇನು ಬಿಡುಗಡೆಗೆಯಾಗ ಬೇಕು ಅನ್ನುವಷ್ಟರಲ್ಲೇ ಮಗದೊಂದು ಆಘಾತಕ್ಕೆ ಗುರಿಯಾಗಿದೆ.
‘ಕಾಲಾ’ ಸಂಪೂರ್ಣ ಸಿನಿಮಾದ ಕೆಲ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿನ ಲೀಕ್ ಆಗಿತ್ತು. ಆದರೆ ಇದೀಗ ಫೇಸ್ ಬುಕ್ ಪೇಜ್ ನಲ್ಲಿ ಇಡೀ ಸಿನೆಮಾ ಲೀಕ್ ಆಗಿದೆ.
ಬುಧವಾರ (ಜೂನ್ 06) ಕಾಲಾ ಸಿನೆಮಾದ ಪ್ರೀಮಿಯರ್ ಶೋ ಸಿಂಗಾಪುರದಲ್ಲಿ ನಡೆಯಿತು. ಈ ಶೋ ನಲ್ಲಿ ಭಾಗವಹಿಸಿದ್ದ ಪ್ರವೀಣ್ ಎಂಬಾತ ಕಾಲಾ ಸಿನೆಮಾವನ್ನು ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಕೊಟ್ಟಿದ್ದಾನೆ. ಸಿನೆಮಾದ ಆರಂಭದಿಂದ ಕೊನೆಯವರೆಗೂ ಫೇಸ್ ಬುಕ್ ಲೈವ್ ಟೆಲಿಕಾಸ್ಟ್ ಮಾಡಿದ್ದಾನೆ.
ಆ ವಿಷಯ ತಿಳಿದ ಕಾಲಾ ಸಿನೆಮಾ ನಿರ್ಮಾಪಕ, ನಟ ಧನುಷ್ ಟ್ವೀಟ್ ಮಾಡುವುದರ ಮೂಲಕ ಸಿನೆಮಾ ಲೀಕ್ ಆಗಿರುವ ಸಂಗತಿಯನ್ನ ಬಹಿರಂಗಬಪಡಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೋಲಿಸರು ಲೈವ್ ಕೊಟ್ಟಿದ್ದ ಪ್ರವೀಣ ಎಂಬಾತನನ್ನು ಬಂಧಿಸಿದ್ದಾರೆ.