ಲೈಫ್ ಸ್ಟೈಲ್

ನಿಂಬೆಯ ಅದ್ಭುತ ಪ್ರಯೋಜನಗಳ ಕರಿತು ಅರಿವು ಅವಶ್ಯ !

ನಿಂಬೆ ಬಹು ಉಪಯೋಗಿ ಫಲ. ಇತರೆ ಹಣ್ಣುಗಳಂತೆ ನೇರವಾಗಿ ಕಚ್ಚಿ ತಿನ್ನುವ ಫಲ ಇದಲ್ಲ. ಬಹುತೇಕ ಅಡುಗೆ ಮಾಡುವಾಗ ನಿಂಬೆಯ ಉಪಯೋಗ ಮಾಡುತ್ತೇವೆ.

Published

on

ನಿಸರ್ಗ ನೀಡಿರುವ ಸಾವಿರಾರು ಫಲಗಳಲ್ಲಿ ನಿಂಬೆ ಹಣ್ಣಿಗೆ ವಿಶಿಷ್ಟ ಸ್ಥಾನವಿದೆ. ರುಚಿಯ ಕಾರಣಕ್ಕೆ ಬಹುತೇಕರಿಗೆ ಪ್ರಿಯವಾದರೆ ಆರೋಗ್ಯದ ದೃಷ್ಟಿಯಿಂದ ನಿಂಬೆಹಣ್ಣು ಅಷ್ಟೇ ಉಪಯೋಗಕಾರಿ. ನಿಂಬೆಹಣ್ಣಿನ ಪ್ರಯೋಜನಗಳ (lemon benefits kannada) ಕುರಿತು ನೀವು ಅರಿತರೆ ಅಕ್ಷರಶಃ ನೀವು ಆಶ್ಚರ್ಯ ಪಡುತ್ತೀರಿ !

ನಿಂಬೆ ಬಹು ಉಪಯೋಗಿ ಫಲ. ಇತರೆ ಹಣ್ಣುಗಳಂತೆ ನೇರವಾಗಿ ಕಚ್ಚಿ ತಿನ್ನುವ ಫಲ ಇದಲ್ಲ. ಬಹುತೇಕ ಅಡುಗೆ ಮಾಡುವಾಗ ನಿಂಬೆಯ ಉಪಯೋಗ ಮಾಡುತ್ತೇವೆ. ಇದರ ವೈದ್ಯಕೀಯ ಗುಣಕ್ಕಾಗಿ ಬಹು ಹಿಂದಿನಿಂದಲೂ ನಿಂಬೆಹಣ್ಣಿನ ಉಪ್ಪಿನ ಕಾಯಿ ಸೇರಿದಂತೆ ವಿವಿಧ ಪದಾರ್ಥ ತಯಾರಿಸುವ ಪದ್ಧತಿಯಿದೆ.

ಬಹು ಉಪಯೋಗಿ ನಿಂಬೆ (lemon benefits kannada)

  • ನಿಂಬೆ ಹಣ್ಣಿನ ರಸವನ್ನು ಒಂದು ಬಟ್ಟಲಿನಲ್ಲಿ ಹಿಂಡಿ ಅದರಲ್ಲಿ  ಕಲ್ಲು ಸಕ್ಕರೆ ಕರಗಿಸಿ ಸೇವಿಸಿದರೆ ವಾಂತಿ ಅಥವಾ ವಾಕರಿಕೆ ನಿಲ್ಲುತ್ತದೆ. ದೂರದ ಊರುಗಳಿಗೆ ವಾಹನದಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಮಾಡುವುದು ಉತ್ತಮ ಮಾರ್ಗ.
  • ನಿಮಗೆ ಅಜೀರ್ಣ ಸಮಸ್ಯೆಯಿದ್ದರೆ ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಐದಾರು ಬಾರಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗಿ ಊಟಕ್ಕೆ ಅನುಕೂಲವಾಗುತ್ತದೆ. ಜತೆಗೆ ಹುಳಿ ತೇಗು ನೀವಾರಣೆಗೆ ನಿಂಬೆ ರಸ ಸೇವಿಸುವುದು ಸರಳ ಉಪಾಯ.
  • ನಿಂಬೆಗೆ ಬಳಲಿಕೆ, ದಾಹ, ನೀರಡಿಕೆ ಶಮನ ಮಾಡುವ ಶಕ್ತಿಯಿದೆ. ಇದು ಪಿತ್ತ ವಿಕಾರ ನಿವಾರಣೆಗೆ ರಾಮಬಾಣ.  ಒಂದು ಹೋಳು ನಿಂಬೆ ರಸ ಹಿಂಡಿ ಅದರ ಜತೆಗೆ ಕುರಿ ಹಾಲು ಬೆರೆಸಿ ಸೇವಿಸಿದರೆ ಆಮಶಂಕೆ ನಿವಾರಣೆಯಾಗುತ್ತದೆ.
  • ರಕ್ತದಿಂದ ಹರಡುವ ಕಾಯಿಲೆಗಳ ನಿವಾರಣೆಗೆ ನಿಂಬೆ ಸೇವನೆ ಸರಳ ಮಾರ್ಗ. ಜತೆಗೆ ಮಾದಕ ವಸ್ತುಗಳ ಸೇವೆನೆಯಿಂದ ಬರುವ ರೋಗಳಿಗೆ ನಿಂಬೆ ತಡೆ ಹಾಕುತ್ತದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆ ರಸ ಬೆರೆಸಿ ಅದಕ್ಕೆ ಸಿಟಿಕೆ ಉಪ್ಪು ಹಾಕಿ ಸೇವಿಸಿದರೆ ಉರಿ ಮೂತ್ರದ ಸಮಸ್ಯೆ ಕೂಡಲೇ ಪರಿಹಾರ ವಾಗುತ್ತದೆ.
  • ಕೆಲವರಿಗೆ ಗುದದ್ವಾರದಲ್ಲಿ ಕೆರೆತ ಕಾಣಿಸಿಕೊಳ್ಳುತ್ತದೆ. ಅದರ ಬಗ್ಗೆ ಇತರರಿಗೆ ಹೇಳುವುದು ಕೂಡ ಕಷ್ಟ. ಅಂತಹ ಸಮಯದಲ್ಲಿ ಮೊಸರ ಅನ್ನದಲ್ಲಿ ನಿಂಬೆ ರಸ ಬೆಸರಿಸಿಕೊಂಡು ಮೂರರಿಂದ ನಾಲ್ಕು ದಿನಗಳ ಕಾಲ ಊಟ ಮಾಡಿದರೆ ಗುದದ್ವಾರದಲ್ಲಿ ಕೆರೆತದ ಸಮಸ್ಯೆ ನಿವಾರಣೆ ಯಾಗುತ್ತದೆ.

Read also:  [ ಬೇವಿನ ಉಪಯೋಗ] ಕಹಿ ಬೇವು ಗುಣದಲ್ಲಿ ಅಮೃತ !

ಜ್ವರಕ್ಕೆ ರಾಮಬಾಣ ನಿಂಬೆ (lemon benefits )

ಕಾಯಿಸಿ ಹಾರಿಸಿದ ನೀರು, ಸಕ್ಕರೆ ಹಾಗೂ ನಿಂಬೆ ರಸ ಬೆರೆಯಿಸಿ ಸೇವಿಸಿದರೆ ಜ್ವರದ ತಾಪ ಕಡಿಮೆಯಾಗುತ್ತದೆ. ಕೆಲವಡೆ ಬಿಸಿ ಟಿಗೆ ನಿಂಬೆ ರಸ ಬೆರೆಯಿಸಿ ಸೇವಿಸುವುದು ಉಂಟು. ಹೀಗೆ ಮಾಡಿದರೆ ನೆಗಡಿ ದೂರವಾಗುತ್ತದೆ. ಅದರಂತೆ ಊಟ ಮಾಡುವುದಕ್ಕೆ ಮುನ್ನ ಒಂದು ಊಟದ ಚಮಚ ನಿಂಬೆ ಹಣ್ಣಿನ ರಸ ಸೇವಿಸಿದರೆ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.

ಪತ್ರಿ ನೂರು ಗ್ರಾಂ ನಿಂಬೆಹಣ್ಣಿನಲ್ಲಿವೆ ಹಲವು ಅಂಶಗಳು

  1. ಸಿ ಅನ್ನಾಂಗ 63 ಮಿಲಿ ಗ್ರಾಂ
  2. ಕಿಲೋ ಕ್ಯಾಲೋರಿ 57 ಮಿಲಿ ಗ್ರಾಂ 
  3. ತೇವಾಂಶ 48.5 ಗ್ರಾಂ
  4. ಪ್ರೋಟೀನ್ 1.5 ಗ್ರಾಂ 
  5. ಖನಿಜಾಂಶ 0.7 ಗ್ರಾಂ 
  6. ಮೇದಸ್ 1.0 ಗ್ರಾಂ 
  7. ಕ್ಯಾಲ್ಸಿಯಂ 90 ಮಿಲಿ ಗ್ರಾಂ 

ಆರೋಗ್ಯ, ಆಹಾರ, ಜೀವನಶೈಲಿ ಕುರಿತು suddidina.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ suddidina@gmail.com  ಗೆ ಸಂಪರ್ಕಿಸಿ.

#ಆರೋಗ್ಯ #ಆಹಾರ #ಜೀವನಶೈಲಿ   #kannadatips #kannadahealthtips #healthtips



 



Leave a Reply

Your email address will not be published. Required fields are marked *

Trending

Exit mobile version