ದಿನದ ಸುದ್ದಿ

ಶ್ರೀ ವಿಶ್ವ ಬಂಧು ಕಲ್ಯಾಣ ಪ್ರೌಢಶಾಲೆ ಹಾಗೂ ಕಾಮ್ರೇಡ್ ಲೆನಿನ್ ಶಾಲೆ ಯಲ್ಲಿ ಪರಿಸರ ದಿನಾಚರಣೆ

Published

on

‘ಮಕ್ಕಳು ಪರಿಸರ ಪ್ರೀತಿ ಬೆಳೆಸಿಕೊಳ್ಳುವಂಥೆ ಹೆಚ್.ಆರ್. ರವೀಂದ್ರನಾಥ್ ಕರೆ’

ಸುದ್ದಿದಿನ ಡೆಸ್ಕ್ : ದಾವಣಗೆರೆ ದಕ್ಷಿಣ ವಲಯದ ಲೆನಿನ್ ನಗರದಲ್ಲಿರುವ ಶ್ರೀ ವಿಶ್ವ ಬಂಧು ಕಲ್ಯಾಣ ಪ್ರೌಢಶಾಲೆ ಹಾಗೂ ಕಾಮ್ರೇಡ್ ಲೆನಿನ್ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಇಂದು ಪರಿಸರದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳಿಗೆ ಪರಿಸರ ರಕ್ಷಣೆ, ಮಹತ್ವಕುರಿತು ಸಂಸ್ಥೆ ಕಾರ್ಯದರ್ಶಿ ಹೆಚ್.ಆರ್.ರವೀಂದ್ರನಾಥ್ ಮಾತನಾಡಿ ಪರಿಸರ ದಿನಾಚರಣೆಗಳಲ್ಲಿ ಮಾತ್ರ ಪರಿಸರ ಕಾಳಜಿ ತೋರಿಸಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿಕೊಳ್ಳುವುದಲ್ಲ ಪ್ರತಿ ನಿತ್ಯವೂ ನಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ಇರಬೇಕು ನೆಟ್ಟ ಸಸಿಗಳನ್ನು ಪೋಶಿಸಬೇಕು ಶಿಕ್ಷಕರು ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಯುವಂತೆ ಪ್ರೇರೇಪಿಸುವ ಕೆಲಸ ಮಾಡಬೇಕು ಎಂದರು.

ಮಕ್ಕಳಿಗೆ ಸಾಲುಮರದ ತಿಮ್ಮಕ್ಕ ಮತ್ತು ದಾವಣೆಗೆರೆ ತಾಲ್ಲೂಕಿನ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಮಿಟ್ಲಕಟ್ಟೆ ವೀರಾಚಾರಿ ಅವರ ಪರಿಚಯ ಹೇಳುವುದರಮೂಲಕ ಪರಿಸರ ಕಾಳಜಿ ಹಾಗೂ ಪರಿಸರ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಧ್ಯಾಯರಾದ ಮಾರುತಿ.ಕೆ.ಓ. ಲೆನಿನ್ ಶಾಲಾ ಮುಖ್ಯ ಶಿಕ್ಷಕ ಆಂಜನಪ್ಪ. ಶಾಲಾ ಶಿಕ್ಷಕರು ಸಿಬ್ಬಂಧಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version