ದಿನದ ಸುದ್ದಿ
ಕಿಸ್ ಕೊಟ್ಟಿದ್ದಕ್ಕೆ ಟ್ಯಾಕ್ಸಿಯಿಂದ ಕಿಕೌಟ್; ಯುಬರ್ ಕಾರ್ ಡ್ರೈವರ್ ಅಮಾನತು
ಸುದ್ದಿದಿನ ಡೆಸ್ಕ್: ಅಮೆರಿಕಾದ ಇಬ್ಬರು ಯುವತಿಯರು ಪರಸ್ಪರ ಕಿಸ್ ಮಾಡಿಕೊಂಡಿದ್ದಕ್ಕೆ ಯುಬರ್ ಕಾರ್ ಡ್ರೈವರ್ ಇಬ್ಬರನ್ನು ಕಿಕೌಟ್ ಮಾಡಿದ್ದಾನೆ.
ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದ ಇಬ್ಬರು ಯುವತಿಯರು ಒಬ್ಬರಿಗೊಬ್ಬರು ಲಿಪ್ ಕಿಸ್ ಕೊಟ್ಟಿದ್ದು ಕಾನೂನು ಬಾಹಿರ ಎಂದು ಹೇಳಿ ಅವರನ್ನು ಕಾರಿನಿಂದ ಹೊರಹಾಕಿದ್ದಾನೆ. ಈ ಘಟನೆ ನಡೆದಿದ್ದು ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ. ಅಹ್ಮದ್ ಎಲ್ ಬೌಟರಿ ಎಂಬಾತ ಯುಬರ್ ಕಂಪನಿಯಲ್ಲಿ ಚಾಲಕ ಕೆಲಸ ಮಾಡುತ್ತಿದ್ದ.
26 ವರ್ಷದ ಅಲೆಕ್ಸ್ ಯೋವಿನ್, 24 ವರ್ಷದ ಎಮ್ಮಾ ಪಿಚ್ಲ್ ಇಬ್ಬರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಕಳೆದ ವಾರ ಹಿಂದೆ ಸ್ನೇಹಿತನೊಬ್ಬನ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಮ್ಯಾನ್.ಹ್ಯಾಟನ್.ಗೆ ಯುಬರ್ ಕಾರಿನಲ್ಲಿ ಹೋಗುತ್ತಿದ್ದಾಗ ಕಿಸ್ ಮಾಡಿದ್ದಾರೆ. ಅನುಚಿತವಾಗಿ ವರ್ತಿಸಿದ್ದಾರೆ. ತನ್ನ ಭುಜದ ಮೇಲೆ ಕಾಲು ಹಾಕಿದ್ದಾರೆ. ಇದು ಕಾನೂನು ಬಾಹಿರ ಎಂದು ಚಾಲಕ ಕಿಕೌಟ್ ಮಾಡಿದ್ದ. ಈ ಘಟನೆ ಹಿನ್ನೆಲೆ ಆತನನ್ನು ಅಮಾನತು ಮಾಡಲಾಗಿದೆ. ಟ್ಯಾಕ್ಸಿ ಶುಲ್ಕ $15 ಮರುಭರಿಸಲಾಗಿದೆ. ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಯುಬರ್ ಕಂಪನಿಯ ಸೂಸನ್ ಹೆಂಡ್ರಿಕ್ ತಿಳಿಸಿದ್ದಾರೆ.