ದಿನದ ಸುದ್ದಿ
ಚುನಾವಣೆ ರವಾನಿಸಿದ ಪಾಠಗಳು: ಡಾ.ಎನ್.ಕೆ.ಪದ್ಮನಾಭ್
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಸ್ತುತ ಮಾಧ್ಯಮಗಳ ಜವಾಬ್ದಾರಿತನ,ಹಾಗೂ ಇಂದಿನ ಪತ್ರಕರ್ತರ ಬದ್ಧತೆ ಕುರಿತು ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಕೆ. ಪದ್ಮನಾಭ್ ಅವರ ಅನಿಸಿಕೆಗಳು.
- ಸುದ್ದಿ ಮಾಧ್ಯಮಗಳನ್ನು ಮುಗ್ಧವಾಗಿ ನಂಬಬಾರದು.ನಂಬುವ ಮುನ್ನ ಯೋಚಿಸಬೇಕು.
- ಸುದ್ದಿ ವಾಹಿನಿಗಳು ರಾಜಕೀಯ ಪಕ್ಷಗಳ ಹಣದ ಹಂಗಿನ ಅಮಲಿನಲ್ಲಿ ಮುಳುಗಿದಾಗ ನಾವು ಎಚ್ಚರವಾಗಿರಬೇಕು.
- ಮುಖಪುಟಗಳಲ್ಲಿ ಜಾಹಿರಾತುಗಳು ಬಂದಾಕ್ಷಣ ರಾಜಕೀಯ ಪಕ್ಷಗಳನ್ನು ಆರಾಧಿಸಬಾರದು.
- ಟಿವಿಯಲ್ಲಿ ಕಾಣಿಸಿಕೊಳ್ಳುವ ಆ್ಯಂಕರ್ ಗಳ ಬಾಲ್ಯಾವಸ್ಥೆಯ ಅಪ್ರಬುದ್ಧ ಮಾತುಗಳು ಮತ್ತು ಪ್ರಶ್ನೆಗಳ ಮೋಡಿಗೆ ಒಳಗಾಗಬಾರದು.
- ಸುದ್ದಿ, ಸಂಪಾದಕೀಯ ಮತ್ತಿತರ ಬರಹಗಳನ್ನು ವಿವೇಕದೊಂದಿಗೆ ಗಮನಿಸಬೇಕು.
- ಟಿವಿಯವರ ಆವೇಶಭರಿತ ಮಾತುಗಳಲ್ಲಿನ ಟೊಳ್ಳುತನವನ್ನು ತಕ್ಷಣವೇ ಪತ್ತೆ ಹಚ್ಚಬೇಕು.
- ಹಿಂದಿನ ಸಕಾರಾತ್ಮಕ ಮಾದರಿಗಳ ಬಗ್ಗೆ ತಿಳಿದುಕೊಂಡ, ಸಮಗ್ರ ಓದು ತಮ್ಮದಾಗಿಸಿಕೊಂಡವರ ವಿಶ್ಲೇಷಣೆಯ ನಿರೀಕ್ಷೆಯೊಂದಿಗಿರಬೇಕು.
- ಓದಿಕೊಳ್ಳದೇ, ತಿಳಿದುಕೊಳ್ಳದೇ ಬಾಯಿಗೆ ಬಂದಂತೆ ಒದರುವದು ಮಾಧ್ಯಮ ವೃತ್ತಿಪರ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿಕೊಳ್ಳಬೇಕು.
- ಜನರ ಹೆಸರಲ್ಲಿ ಕೂಗುವ, ಚೀರುವ, ಜಗಳಕ್ಕೆಳೆಸುವ ವಿತಂಡವಾದಿಗಳು ಟಿವಿಯಲ್ಲಿ ಕಾಣಿಸಿಕೊಂಡಾಕ್ಷಣ ಚಾನಲ್ ಚೇಂಜ್ ಮಾಡಬೇಕು.
- ಪತ್ರಿಕೆಗಳ ಪುಟಗಳು ಅಧಿಕಾರ ರಾಜಕಾರಣದ ಹುನ್ನಾರಗಳಿಗೀಡಾಗಿ ಕಲುಷಿತಗೊಂಡಾಗ ಧಿಕ್ಕರಿಸುವ ವಿವೇಚನೆ ಪ್ರದರ್ಶಿಸಬೇಕು.
- ಚುನಾವಣೆಯ ಕಣ ಎಂದರೆ ಮನರಂಜನೆಯ ಅಖಾಡ ಅಲ್ಲ ಎಂಬುದನ್ನು ಮುಂದಿನ ಚುನಾವಣೆಗೆ ಮುನ್ನವೇಗೊತ್ತುಮಾಡಿಕೊಳ್ಳಬೇಕು.