ದಿನದ ಸುದ್ದಿ

ಭವಿಷ್ಯನಿಧಿ 2ನೇ ಬಾರಿ ಮುಂಗಡ ಹಣ ಪಡೆಯಲು ಅವಕಾಶ

Published

on

ಸುದ್ದಿದಿನ,ದಾವಣಗೆರೆ: ಪ್ರಸ್ತುತ ಕೋವಿಡ್ 2ನೇ ಅಲೆಯ ಪರಿಸ್ಥಿತಿಯಲ್ಲಿ ಭವಿಷ್ಯನಿಧಿ ಸದಸ್ಯರಿಗೆ 2ನೇ ಬಾರಿ ಮುಂಗಡ ಹಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯವಿರುವ ಭವಿಷ್ಯನಿಧಿ ಸದಸ್ಯರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಭವಿಷ್ಯನಿಧಿ ಸದಸ್ಯರ ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು, ಭವಿಷ್ಯನಿಧಿ ಸಂಸ್ಥೆಯು ಚಂದಾದಾರರಿಗೆ ಕೋವಿಡ್-19ರ ಅಡಿಯಲ್ಲಿ ವಿಶೇಷ ಮುಂಗಡ ಸೌಲಭ್ಯವನ್ನು ಒದಗಿಸಿತ್ತು. ಸಾಮಾಜಿಕ ಭದ್ರತೆ 2020ರ ಸಂಹಿತೆಯ ಸೆಕ್ಷನ್-142ನ್ನು ಮೇ 30 ರಿಂದ ಅನ್ವಯಗೊಳಿಸಲಾಗಿದ್ದು, ಸಂಹಿತೆಯ ನಿಬಂಧನೆಗಳನುಸಾರ ಫಲಾನುಭವಿಯ ಗುರುತನ್ನು ಸ್ಥಾಪಿಸಲು ಆಧಾರ್ ಸಂಖ್ಯೆ ಅವಶ್ಯಕವಾಗಿರುತ್ತದೆ.

ಇದನ್ನೂ ಓದಿ | ದಾವಣಗೆರೆ | ಲಾಕ್‌ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ; 67 ಪ್ರಕರಣ ದಾಖಲು, 4.63 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ, ವಾಹನ ವಶ

ಭವಿಷ್ಯನಿಧಿ ಸಂಸ್ಥೆಯು ಜೂ.1 ರಿಂದ ಇಸಿಆರ್ ಸಲ್ಲಿಸಲು ಸದಸ್ಯರ ಆಧಾರ್ ಅನ್ನು ಕಡ್ಡಾಯವಾಗಿ ಯುಎಎನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಆದೇಶಿಸಲಾಗಿದ್ದು, ಎಲ್ಲಾ ಉದ್ಯೋಗದಾತರು ಜೂ.1 ರಿಂದ ಇಸಿಆರ್ ಫೈಲ್ ಮಾಡಲು ಭವಿಷ್ಯನಿಧಿ ಸದಸ್ಯರ ಆಧಾರ್ ಅನ್ನು ಯುಎಎನ್ ಸಂಖ್ಯೆಯೊಂದಿಗೆ ಜೋಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version