ದಿನದ ಸುದ್ದಿ

ಯುವಜನತೆ ಕೀರ್ತಿ ತರುವ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ : ಹೆಬ್ಬಾಳ ಮಠ ಮಹಾಂತ ರುದ್ರೇಶ್ವರ ಮಹಾಸ್ವಾಮಿ

Published

on

ಸುದ್ದಿದಿನ,ದಾವಣಗೆರೆ : ಇಂದಿನ ಯುವಕರೇ ಮುಂದಿನ ದೇಶದ ಶಕ್ತಿ ಎಂದು ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರವಾದ ಹೆಬ್ಬಾಳ ಗ್ರಾಮದಲ್ಲಿ ಈ ದಿನ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಇಲ್ಲಿನ ಯುವಕ ಮಂಡಳಿಯವರು ಆಯೋಜಿಸಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಕಾರ್ಯ ಕ್ರಮವನ್ನು ಉದ್ಘಾಟನೆ ನೆರವೇಸಿ ಮಾತನಾಡಿದ ಅವರು,

ಯುವಕರು ಸತ್ಯವಂತ ಸನ್ಮಾರ್ಗದಲ್ಲಿ ನಡೆಯಲು ಕ್ರೀಡೆಯೂ ಸಹಕಾರಿ, ಕ್ರೀಡೆಯನ್ನು ಮೋಜು-ಮಸ್ತಿ ಹಾಗೂ ದುಶ್ಚಟ ವನ್ನಾಗಿ ಪರಿವರ್ತಿಸಿಕೊಂಡು ಇರುವುದು ವಿಷಾದನೀಯ ಕ್ರೀಡೆಯನ್ನು ಮೈಗೂಡಿಸಿಕೊಂಡು ತಮ್ಮ ಪ್ರತಿಭೆಯ ಮೂಲಕ ದೇಶಕ್ಕೆ ಊರಿಗೆ ಅವು ತಂದೆತಾಯಿಗಳಿಗೆ ಗುರುಹಿರಿಯರಿಗೆ ಕೀರ್ತಿ ತರುವಂಥ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಇದೇ ವೇಳೆ ಮುಂದಿನ ವರ್ಷ ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುವಂತೆ ಸಂಘಕ್ಕೆ ಸಲಹೆಯನ್ನು ನೀಡಿದರು.

ಮುಖ್ಯ ಅತಿಥಿಗಳಾದ ಡಾ॥ ಬಿ ಟಿ ಸಿದ್ಧಪ್ಪನವರು ಮಾತನಾಡಿ ಈ ಒಂದು ಪಂದ್ಯಾವಳಿಯಲ್ಲಿ ಯಾವುದೇ ಹಿತಕರವಾದ ಘಟನೆ ನಡೆಯದೆ ಈ ಒಂದು ಒಂದು ಕ್ರೀಡೆ ಕ್ರೀಡೆಯಾಗಿಯೇ ನಡೆಯಬೇಕು. ಇಲ್ಲಿ ಜಗಳಕ್ಕೆ ಮುನಿಸಿಗೆ ಅವಕಾಶ ನೀಡಬಾರದು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಕ್ಷೇತ್ರದ ಬಿಜೆಪಿಯ ಕಾರ್ಯದರ್ಶಿಗಳು ಹಾಗೂ ಪ್ರಬಲ ಆಕಾಂಕ್ಷಿಗಳು ಆದ ಜಿ ಎಸ್ ಶ್ಯಾಮ್ ಪರಿಚಯ ಮಾಡಿಕೊಳ್ಳುವುದರ ಮೂಲಕ ಕ್ರೀಡೆಯ ಅನುಭವವನ್ನು ಹಂಚಿಕೊಂಡರು. ಕೊನೆಯಲ್ಲಿ ವಾಲಿಬಾಲ್ ಬೀಸುವ ಮೂಲಕ ಶ್ರೀಗಳು ಆಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ವೇದಿಕೆಯಲ್ಲಿ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version