ದಿನದ ಸುದ್ದಿ

ಲೆದರ್ ಎಂಪೋರಿಯಂ ತೆರೆಯಲು ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಜಿಲ್ಲೆಯಲ್ಲಿ ಪ್ರಾಂಚೈಸಿ ಮೂಲಕ ಲಿಡಕರ್ ಲೆದರ್ ಎಂಪೋರಿಯಂ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.

ಚರ್ಮ ಕುಶಲಕರ್ಮಿ ಕುಟುಂಬಗಳಿಗೆ ಸೇರಿದ ಅರ್ಹ ಯುವಕ, ಯುವತಿಯರು ಲಿಡಕರ್ ವೆಬ್‍ಸೈಟ್‍ www.lidkar.com ನಲ್ಲಿ ಲಭ್ಯವಿರುವ ಪ್ರಾಂಚೈಸಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಡಿ.05 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸ ಬಯುಸುವವರು ಕನಿಷ್ಠ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವ್ಯಾಪಾರದಲ್ಲಿ ಅನುಭವ ಹೊಂದಿರುವುದರೊಂದಿಗೆ ಪ್ರಾಂಚೈಸಿ ಸ್ಕೀಮ್ ಅನ್ವಯ ಬಂಡವಾಳ ಹೊಡಿಕೆಗೆ ಸಿದ್ದರಿರಬೇಕು.

ಡಿಪ್ಲೋಮಾ ಇನ್ ಲೆದರ್ ಟೆಕ್ನಾಲಜಿ ಪಾದರಕ್ಷೆ/ಚರ್ಮ ವಸ್ತುಗಳ ತಯಾರಿಕೆಯಲ್ಲಿ ಒಂದು ವರ್ಷದ ಸರ್ಟೀಫಿಕೇಟ್ ಕೋರ್ಸ್, ಪಿಜಿ ಹೈಯರ್ ಡಿಪ್ಲೋಮಾ, ಪಾದರಕ್ಷೆಗಳ ಮ್ಯಾನೇಜ್ ಮೆಂಟ್‍ಕೋರ್ಸ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9741833307 ನ್ನು ಸಂಪರ್ಕಿಸಬಹುದೆಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version