ದಿನದ ಸುದ್ದಿ
ದಾವಣಗೆರೆ | ಲಿಡ್‍ಕರ್‍ನಿಂದ ಚರ್ಮದ ಉತ್ಪನ್ನಗಳು ರಿಯಾಯತಿ ದರದಲ್ಲಿ ಮಾರಾಟ
ಸುದ್ದಿದಿನ,ದಾವಣಗೆರೆ : ಗೌರಿ-ಗಣೇಶ ಹಬ್ಬದ ಪ್ರಯುಕ್ತ ಎ.ವಿ.ಕೆ ಕಾಲೇಜು ರಸ್ತೆಯಲ್ಲಿರುವ ಲಿಡ್‍ಕರ್ ಮಾರಾಟ ಮಳಿಗೆಯಲ್ಲಿ ಆ.3 ರಿಂದ 20 ರವರೆಗೆ ಚರ್ಮ ಕುಶಲಕರ್ಮಿಗಳಿಂದ ತಯಾರಿಸಿದ ಚರ್ಮದ ವಸ್ತುಗಳು, ಪಾದರಕ್ಷೆಗಳು, ಚರ್ಮದ ಬೆಲ್ಟ್, ಪರ್ಸ್, ಲೇಡಿಸ್ ವ್ಯಾನಿಟಿ ಬ್ಯಾಗ್‍ಗಳು, ಇತ್ಯಾದಿಗಳನ್ನು ಶೇ.20 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದೆಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಹಾಗೂ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243