ದಿನದ ಸುದ್ದಿ

ಭಾರತೀಯ ಸೇನಾಪಡೆ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕ

Published

on

ಸುದ್ದಿದಿನ ಡೆಸ್ಕ್ : ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಭಾರತೀಯ ಸೇನಾಪಡೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

29ನೇ ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳರುವ ಪಾಂಡೆ ಅವರು ಏಪ್ರಿಲ್ 30ರಂದು ತಮ್ಮ 28ತಿಂಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಲಿರುವ ಮನೋಜ್ ಮುಕುಂದ್ ನರವಣೆ ಅವರ ಸ್ಥಾನವನ್ನು ತುಂಬಲಿದ್ದಾರೆ.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಶಿಕ್ಷಾರ್ಥಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು 1982ರಲ್ಲಿ ಕಾರ್ಪ್ಸ ಆಫ್ ಎಂಜಿನಿಯರ್ಸ್ ತಂಡಕ್ಕೆ ನೇಮಿಸಲಾಗಿತ್ತು. ಜಮ್ಮು ಕಾಶ್ಮೀರದ ನಿಯಂತ್ರಣಾ ರೇಖೆಯ ಜೊತೆಗೆ ಪಲ್ಲನ್ವಾಲಾ ವಿಭಾಗದಲ್ಲಿ ಕೈಗೊಂಡ ಆಪರೇಶನ್ ಪರಾಕ್ರಮದ ವೇಳೆ ಇಂಜಿನೀಯರ್ ರೆಜಿಮೆಂಟ್ ನೇತೃತ್ವವನ್ನು ಮನೋಜ್ ಪಾಂಡೆ ವಹಿಸಿದ್ದರು.

39ವರ್ಷಗಳ ಸೇನಾ ಸೇವೆಯಲ್ಲಿ ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ಹಲವು ಹುದ್ದೆಗಳನ್ನು ಅಲಂಕರಿಸಿದ್ದು ಲಡಾಖ್ನ ಬೆಟ್ಟ ಪ್ರದೇಶದ ಸೇನಾ ತುಕಡಿ ಮತ್ತು ಈಶಾನ್ಯ ಭಾಗದ ಸೇನಾ ಮುಖ್ಯಸ್ಥರಾಗಿ, ಎಲ್ಒಸಿ ಸೇರಿದಂತೆ ಇನ್ಫೆಂಟ್ರಿ ಬ್ರಿಗೇಡ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂಡಮಾನ್ ನಿಕೋಬಾರ್ ಕಮಾಂಡರ್ ಇನ್ ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version