ದಿನದ ಸುದ್ದಿ
ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ಪರಿಶ್ರಮವಿದ್ದರೆ ಯಶಸ್ಸು ನಿಶ್ಚಿತ
ಸುದ್ದಿದಿನ,ದಾವಣಗೆರೆ:ಎ.ವಿ.ಕೆ ಮಹಿಳಾ ಕಾಲೇಜು ಹಾಗೂ ಹಳೆಬಿಸಲೇರಿ ಗ್ರಾಮದ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಳೆಬಿಸಲೇರಿ ಗ್ರಾಮದಲ್ಲಿ ಆಯೋಜಿಸಲಾದ 5ನೇ ದಿನದ ಸಂಜೆ 6:30 ಕ್ಕೆ ವೇದಿಕೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ಬಸವನಗೌಡರ್ ಕುಂದೂರು ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು. ಇವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡುತ್ತಾ ಯುವಜನತೆ ಮೊಬೈಲ್ ಅನ್ನು ಅವಶ್ಯಕತೆಗೆ ಅನುಗುಣವಾಗಿ ಹಿತಮಿತವಾಗಿ ಬಳಸಿದ್ದಲ್ಲಿ ಅದರ ಸದುಪಯೋಗ ಅರಿವು ಮೂಡಿಸಿದಂತಾಗುತ್ತದೆ ಹಾಗೂ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಇದ್ದಲ್ಲಿ ಬರುತ್ತದೆಂದು ತಿಳಿಸಿದರು.
ಹಾಗೆಯೇ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕಮಲ ಸೊಪ್ಪಿನ್ ರವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿ ಬದುಕಿಗೆ ಶಿಸ್ತು, ಸಮಯ ಪ್ರಜ್ಞೆ ಬೇಕು ದಾನ, ಧರ್ಮದ ಸಮಾಜಮುಖಿ ಚಟುವಟಿಕೆಗಳನ್ನು ಸೇವಾ ಮನೋಭಾವದಿಂದ ಪಾಲಿಸಬೇಕೆಂದು ಕರೆ ನೀಡಿದರು.
ಶ್ರೀಯುತ ವಿಶ್ವನಾಥ.ಡಿ.ಆರ್ ಉಪನ್ಯಾಸಕರು ಹಾಗೂ ಪತ್ರಿಕ ವರದಿಗಾರರು ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದ ಮೂಲಕ ಇಂದಿನ ಯುವಜನತೆ ಗ್ರಾಮೀಣ ಬದುಕನ್ನು ಅಪ್ಪಿಕೊಳ್ಳಬೇಕೆಂದು ಹಾಗೂ ವಿಶೇಷ ವ್ಯಕ್ತಿಗಳ ಅನುಭವದ ಮಾತುಗಳು ತರಗತಿಯ ಜ್ಞಾನಕ್ಕಿಂತ(ಕಲಿಕೆ) ತಿಳಿಸಿದರು. ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಕಳಚಾರ ಅವರು ಮಾನವೀಯತೆ ಕುರಿತು ಮಾತನಾಡಿದರು.
ಇಂದಿನ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಚಂದನ ಪ್ರಾರ್ಥನೆ ನೆರವೇರಿಸಿದರು. ಭೂಮಿಕಾ ರವರು ಸ್ವಾಗತಿಸಿದರು. ಮಾಲ ಮತ್ತು ಜ್ಯೋತಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಡಾ. ಕವಿತಾ ಆರ್. ಜಿ. ಅತಿಥಿ ಪರಿಚಯ ಮಾಡಿಕೊಟ್ಟರು ಹಾಗೂ ಡಾ. ವಿಶ್ವನಾಥ್ ಪಿ ಇವರು ಶಿಬಿರಾರ್ಥಿಗಳು ಆಯೋಜಿಸಿದ್ದ ವಿವಿಧ ಮಹಿಳಾ ಸಂಘಗಳ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರ ಬಗ್ಗೆ ವಾಚಿಸಿದರು ಊರಿನ ಹಿರಿಯ ಮುಖಂಡರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು.
ಕಾಲೇಜಿನ ಬೋಧಕರಾದ ಶ್ರೀ ಚನ್ನಬಸವನಗೌಡ, ದಿವ್ಯಶ್ರೀ ಜಿ, ಶ್ರೀಮತಿ ಉಷಾ ಎಲ್, ಆಂಗ್ಲ ಭಾಷೆ ಉಪನ್ಯಾಸಕ ಮುಂತಾದವರು ಉಪಸ್ಥಿತರಿದ್ದರು ಈ ವಿಶೇಷ ಶಿಬಿರವು ಗ್ರಾಮದ ಮಹಿಳೆಯರನ್ನು ಒಗ್ಗೂಡಿಸುವ, ಶಬರಿಕರಣ ಗೊಳಿಸುವ ಉಧಾರತೆಯ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಕಾರ್ಯಕ್ರಮವಾಗಿ ಎಲ್ಲರ ಗಮನ ಸೆಳೆಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243