ದಿನದ ಸುದ್ದಿ
ಕೆಆರ್‌ಎಸ್‌ನಿಂದ ಧುಮ್ಮಿಕ್ಕುತ್ತಿದೆ ಬಣ್ಣದ ಚಿತ್ತಾರ
ಸುದ್ದಿದಿನ ಡೆಸ್ಕ್: ದಶಕದ ನಂತರ ತುಂಬಿರುವ ಕೆಆರ್‌ಎಸ್‌ನಿಂದ ನೀರು ಧುಮ್ಮಿಕ್ಕುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿವೆ. ಇದೀಗ ಕನ್ನಂಬಾಡಿ ಜಲಾಶಯ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಿದ್ಧವಾಗಿದೆ.
ಕೆಆರ್‌ಎಸ್ ಕ್ರಸ್ಟ್ ಗೇಟ್ ತೆಗೆದ ನಂತರ ಹೊರ ಹರಿವು ಹೆಚ್ಚಾಗಿದ್ದು, ಇದೇ ಜಾಗದಲ್ಲಿ ಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಈಗ ಹೊರ ಹೋಗುತ್ತಿರುವ ನೀರು ಬಣ್ಣದ ಚಿತ್ತಾರದಿಂದ ಕಣ್ಣು ಕೋರೈಸುತ್ತಿದೆ.
ಕೆಆರ್‌ಎಸ್ ಜಲಾಶಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಹೊರ ಹೋಗುತ್ತಿರುವ ನೀರಿಗೆ ಲೈಟಿಂಗ್ ಮಾಡಿರುವುದರಿಂದ ಪ್ರವಾಸಿಗರು ದೂರದಿಂದಲೇ ಬಣ್ಣದೋಕುಳಿಯಂತೆ ಕಾಣುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ನೀಲಿ, ಕೆಂಪು, ಹಸಿರು ಮೊದಲಾದ ಬಣ್ಣದ ದೀಪಗಳನ್ನು ಅಳವಡಿಸಲಾಗಿದೆ.
ಉಕ್ಕಿ ಹರಿಯುತ್ತಿದೆ ದೇಶಭಕ್ತಿ: ಕ್ರಸ್ಟ್‌ಗೇಟ್‌ನಿಂದ ಹರಿಯುತ್ತಿರುವ ನೀರು ಕೇಸರಿ, ಬಿಳಿ, ಹಸಿರು ಬಣ್ಣವನ್ನು ಪ್ರತೀಕಿಸುತ್ತಿದ್ದು, ನೋಡುಗರಲ್ಲಿ ದೇಶ ಭಕ್ತಿ ಉಕ್ಕಿ ಹರಿಸುತ್ತಿದೆ.