ರಾಜಕೀಯ
ಮತ್ತೆ ಸಿದ್ದರಾಮಯ್ಯರನ್ನು ಸಿಎಂ ಆಗಿ ನೋಡಲು ಇಷ್ಟ : ಶಾಸಕ ಬಿ.ಆರ್.ಪಾಟೀಲ್
ಸುದ್ದಿದಿನ ಡೆಸ್ಕ್ : ಸಿದ್ರಾಮಯ್ಯರನ್ನು ಮತ್ತೆ ಸಿಎಂ ಸ್ಥಾನದಲ್ಲಿ ಕಾಣಲು ಬಯಸುತ್ತೇನೆ ಎಂದು ಕಲಬುರಗಿಯಲ್ಲಿ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಸಿದ್ರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ, ಮತ್ತೊಮ್ಮೆ ಸಿಎಂ ಆಗುತ್ತಾರೆನ್ನುವ ವಿಶ್ವಾಸವಿದೆ. ಆದ್ರೆ ಅವರು ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ಮತ್ತೆ ಸಿಎಂ ಆಗ್ತಿನಿ ಅಂದಿಲ್ಲ.ಸಮ್ಮಿಶ್ರ ಸರಕಾರದ ಅವಧಿ ಮುಗಿದ ನಂತ್ರ ಮತ್ತೆ ಸಿಎಂ ಆಗ್ತಿನಿ ಅಂದಿದ್ದಾರೆ.ಇದರಲ್ಲಿ ಅಪಾರ್ಥ ಮಾಡಿಕೊಳ್ಳುವ ಮಾತೇ ಇಲ್ಲ. ಸಿದ್ರಾಮಯ್ಯ ಸಿಎಂ ಆಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401