ದಿನದ ಸುದ್ದಿ

ನಮ್ಮದು ಸ್ವತಂತ್ರ ಧರ್ಮದ ಗುರಿ; ಮುರುಘಾಶರಣರು

Published

on

ಸುದ್ದಿದಿನ ಚಿತ್ರದುರ್ಗ: ಏಸುಕ್ರಿಸ್ತನ ನಂತರ ಸ್ವಾಭಿಮಾನಕ್ಕಾಗಿ ಕ್ರಾಂತಿ ನಡೆದಿದೆ ಎಂದರೆ ಅದು 12ನೇ ಶತಮಾನದಲ್ಲಿ. ಆಸ್ತಿತ್ವಕ್ಕಾಗಿ ಹೋರಾಟ ನಡೆದಿದೆ ಎಂದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಮಠದ ಅನುಭವ ಮಂಟಪದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ- ಮುನ್ನೋಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರದಲ್ಲಿ ಎಲ್ಲ ಧರ್ಮಗಳಿಗೂ ಸ್ವತಂತ್ರ ಧರ್ಮದ ಸ್ಥಾನಮಾನ ಸಿಕ್ಕಿದೆ. 12ನೇ ಶತಮಾನದಷ್ಟು ಹಳೆಯದಾದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನ ನೀಡುವಲ್ಲಿ ವಿಳಂಬವಾಗುತ್ತಿದೆ. ನಮ್ಮದು ಸ್ವತಂತ್ರ ಧರ್ಮದ ಗುರಿ. ನಾವು ಹಕ್ಕೊತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಬಸವ ತತ್ವ ಪರಿಪಾಲಕರಲ್ಲಿ ಅನೇಕ ಗೊಂದಲಗಳಿವೆ. ಬಸವಣ್ಣನವರನ್ನು ಮುಂದಿಟ್ಟುಕೊಂಡು ಹೋದ ನಮ್ಮನ್ನು ಪೀಠದಿಂದ ಕೆಳಗಿಳಿಸಲು ಪ್ರಯತ್ನಿಸಿದರು. ಅದಾವುದಕ್ಕೂ ನಾವು ಜಗ್ಗಲಿಲ್ಲ. ಸ್ವತಂತ್ರ ಧರ್ಮದ ವಿಚಾರದಲ್ಲಿ ಬೀದಿ ರಂಪಾಟ ಸಾಕು. ನಾವು ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕಾಗಿದೆ ಎಂದರು.

ಸಿದ್ಧಯ್ಯನಕೋಟೆ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸ್ವತಂತ್ರ ಧರ್ಮದ ವಿಚಾರ ಬಂದಾಗ ಮಠಾಧೀಶರು, ಭಕ್ತರು ಜಾಗೃತರಾಗಬೇಕಿದೆ ಎಂದು ಹೇಳಿದರು.

Trending

Exit mobile version