ದಿನದ ಸುದ್ದಿ
Live | ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ಜೀತೋ ಕನೆಕ್ಟ್ 2022 ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 10.30 ಕ್ಕೆ ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆ- ಜೀತೋ ಕನೆಕ್ಟ್ 2022 ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಷಣ ಮಾಡುತ್ತಿದ್ದಾರೆ.
ಜೀತೋ-ಜಗತ್ತಿನಾದ್ಯಂತ ಇರುವ ಜೈನರನ್ನು ಒಗ್ಗೂಡಿಸುವ ಜಾಗತಿಕ ಸಂಘಟನೆ ಆಗಿದೆ. ಇದು ವ್ಯಾಪಾರ, ವ್ಯವಹಾರ, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪರಸ್ಪರ ನೆರವು ನೀಡಲು ಸಂಪರ್ಕ ಜಾಲ ಬೆಳೆಸಲು ಹಾಗೂ ವೈಯಕ್ತಿಕ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ. ಮೂರು ದಿನಗಳ ಈ ಕಾರ್ಯಕ್ರಮವನ್ನು ಪುಣೆಯ ಗಂಗಾಧಾಮ್ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದು, ವಾಣಿಜ್ಯ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಹಲವು ಗೋಷ್ಠಿಗಳು ನಡೆಯಲಿವೆ.
ಮೋದಿ ಲೈವ್ ವಿಡಿಯೋ
Addressing the inaugural ceremony of JITO Connect. https://t.co/riJAGJcZnf
— Narendra Modi (@narendramodi) May 6, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243