ದಿನದ ಸುದ್ದಿ

‘ಲೋಡ್ ಶೆಡ್ಡಿಂಗ್’ ಮಾಡದಂತೆ ಕೆಪಿಟಿಸಿಎಲ್ ಗೆ ಎಚ್.ಡಿ.ಕೆ ಸೂಚನೆ : ಇಂದು ಮಹತ್ವದ ಸಭೆ

Published

on

ಸುದ್ದಿದಿನ,ಬೆಂಗಳೂರು : ಕಲ್ಲಿದ್ದಲು ಕೊರತೆಯಿಂದ, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ವಿಚಾರವಾಗು ಇಂದು ಇಂಧನ ಇಲಾಖೆಯ ಅಧಿಕಾರಿಗಳ ವಿಧಾನಸೌಧದಲ್ಲಿ ಮಧ್ಯಾಹ್ನ 3ಗಂಟೆಗೆ ಮಹತ್ವದ ಸಭೆ ನಡೆಯಲಿದೆ. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿರುವ ಬಗ್ಗೆ ಮುಖ್ಯಂಮತ್ರಿ ಕುಮಾರ ಸ್ವಾಮಿಯವರು ಚರ್ಚೆ ನಡೆಸಲಿದ್ದಾರೆ.

ವಿದ್ಯುತ್ ಉತ್ಪಾದನೆ ಸಾಧ್ಯವಾಗದೆ ರಾತ್ರಿ ಹೊತ್ತಲ್ಲಿ ಲೋಡ್ ಶೆಡ್ಡಿಂಗ್ ಮಾಡಲು ಮುಂದಾಗಿದ್ದಾರೆ ಅಧಿಕಾರಿಗಳು.ಈ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಧಾನಗೊಂಡಿರುವ ಸಿಎಂ ಕುಮಾರಸ್ವಾಮಿ ಅವರು ಕಲ್ಲಿದ್ದಲು ಕೊರತೆ ಬಗ್ಗೆ ತಡವಾಗಿ ಮಾಹಿತಿ ಕೊಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಲೋಡ್ ಶೆಡ್ಡಿಂಗ್ ಮಾಡದಂತೆ ಈಗಾಗಲೇ ಸೂಚನೆ ಕೊಟ್ಟಿರುವ ಸಿಎಂ ಕುಮಾರಸ್ವಾಮಿ ಅವರು ಲೋಡ್ ಶೆಡ್ಡಿಂಗ್ ಮಾಡದೆ ಪರ್ಯಾಯ ಮಾರ್ಗಗಳ ಮೂಲಕ ವಿದ್ಯುತ್ ಉತ್ಪಾದಿಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಹೀಗಾಗಿ ಇಂದು ಲೋಡ್ ಶೆಡ್ಡಿಂಗ್ ಮಾಡುವುದರ ಬಗ್ಗೆ ‌ಮಹತ್ವದ ತೀರ್ಮಾನವನ್ನು
ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಸಿಎಂ ಕುಮಾರಸ್ವಾಮಿ.‌ಅಲ್ಲದೆ ಕಲ್ಲಿದ್ದಲು ಬಿಟ್ಟು, ಬೇರೆ ಯಾವ ಮಾರ್ಗಗಳಿಂದ ವಿದ್ಯುತ್ ಉತ್ಪಾದನೆ ಮಾಡುವುದು, ಕಲ್ಲಿದ್ದಲು ಪೂರೈಕೆ ಮಾಡುವಂತೆ ಕೇಂದ್ರದ ಮೇಲೆ ಮತ್ತೊಮ್ಮೆ ಒತ್ತಡ ಹಾಕುವ ಬಗ್ಗೆಯೂ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಸಿಎಂ ಕುಮಾರಸ್ವಾಮಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version