ದಿನದ ಸುದ್ದಿ

ಲಾಕ್ ಡೌನ್ ಉಲಂಘನೆ | ಪೊಲೀಸರ ಮೇಲೆ ಹಲ್ಲೆ ; ಯುವಕನ ಬಂಧನ

Published

on

ಸುದ್ದಿದಿನ,ಹಾವೇರಿ : ಕೊರೋನಾ ಕೋವಿಡ್ ಲಾಕ್ ಡೌನ್ ಹಿನ್ನೆಲೆ. ಲಾಕ್ ಡೌನ್ ಉಲಂಘಿಸಿ ಅನಗತ್ಯವಾಗಿ ತಿರುಗುತ್ತಿದ್ದ ಯುವಕನನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಈ ಯುವಕ ಜಬೀವುಲ್ಲಾ ಮೆಹಬೂಬಸಾಬ ಖಾಜಿ ಎಂಬುವವನಾಗಿದ್ದು, ಅವಾಚ್ಯ ಶಬ್ದದಿಂದ  ಪೊಲೀಸರಿಗೆ ನಿಂದಿಸಿದ್ದಾನೆ. ಜೀವ ಬೇದರಿಕೆ ಹಾಕಿದ ಆರೋಪ, ಲಾಕ್ ಡೌನ್ ಹಿನ್ನಲೆ ವಾಹನ ತಪಾಸಣೆಗೆ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಮತ್ತು ಹೋಂ ಗಾರ್ಡ ಗಳಿಗೆ ಪ್ರಾಣ ಬೇದರಿಕೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆ 353 ಅಡಿ ಜಬಿವುಲ್ಲಾ ಮೆಹಬೂಬದಾಬ ಮೇಲೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version