ದಿನದ ಸುದ್ದಿ
ಲಾಕ್ ಡೌನ್ ಎಫೆಕ್ಟ್ | ಸಂಕಷ್ಟದಲ್ಲಿರೊ ಮೈಸೂರು ಮೃಗಾಲಯಕ್ಕೆ ದೇಣಿಗೆ ನೀಡಿದ ಸಚಿವರು
ಸುದ್ದಿದಿನ,ಮೈಸೂರು : ದೇಶದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರೋ ಮೈಸೂರು ಮೃಗಾಲಯ ಮತ್ತೆ ಸಹಾಯಹಸ್ತ ಚಾಚಿದ್ದಾರೆ ಸಚಿವದ್ವಯರು.
ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಗೋಪಾಲಯ್ಯರಿಂದ ಸಹಾಯ ಮಾಡಿದ್ದು, ಎರಡನೇ ಕಂತಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ರಿಂದ 45 ಲಕ್ಷ ರೂ ಚೆಕ್ ಅನ್ನು ಹಸ್ತಾಂತರ ಮಾಡಿದ್ದಾರೆ. ಮೊದಲ ಕಂತಿನಲ್ಲಿ 73 ಲಕ್ಷ ರೂಗಳನ್ನು ಸಚಿವರು ನೀಡಿದ್ದರು. ಹಾಗೆ ಮೃಗಾಯಲಕ್ಕೆ ಸಚಿವ ಗೋಪಾಲಯ್ಯರು 6 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮೃಗಾಲಯದ 300ಕ್ಕು ಹೆಚ್ಚು ನೌಕರರಿಗೆ 25 ಕೆಜಿ ಆಹಾರ ಪದಾರ್ಥಗಳ ಕಿಟ್ ಅನ್ನು ಸಚಿವ ಗೋಪಾಲಯ್ಯ ಅವರು ವಿತರಿಸಿದರು.
ಸಂಕಷ್ಟದಲ್ಲಿರೋ ಮೃಗಾಲಯಕ್ಕೆ ಮುಂದೆ ಮತ್ತೆ ಸಹಾಯ ಮಾಡೋದಾಗಿ ಸಚಿವರ ಭರವಸೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243