ದಿನದ ಸುದ್ದಿ
ಲಾಕ್ ಡೌನ್ | ಹೆತ್ತವರ ಮಡಿಲು ಸೇರಿದ ಮಕ್ಕಳು
ಸುದ್ದಿದಿನ,ಧಾರವಾಡ : ಲಾಕ್ ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದ 10 ವರ್ಷದ ರೋಮುಕುಮಾರಿ, 08 ವರ್ಷದ ಪೋಸುಕುಮಾರಿ ಇಬ್ಬರು ಬಾಲಕಿಯರು ಶುಕ್ರವಾರ ( ಮೇ.08) ರಾತ್ರಿ, ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ಹೆತ್ತ ತಂದೆ ತಾಯಿಗಳ ಮಡಿಲು ಸೇರಿದ್ದಾರೆ.
ಕಳೆದ ಐವತ್ತು ದಿನಗಳಿಂದ ಹೆತ್ತವರಿಂದ ಅಗಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್,ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.ಮೇ.07 ರಂದು ಜಿಲ್ಲಾಧಿಕಾರಿಗಳು ಶುಭ ಹಾರೈಸಿ ಮಕ್ಕಳನ್ನು ಬೀಳ್ಕೊಟ್ಟಿದ್ದರು.
ರಮೇಶ್ ರಾವಲ್ ಅವರು ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ದೂರದ ರಾಜಸ್ಥಾನವರೆಗೆ ಹೋಗಿ ಮಕ್ಕಳನ್ನು ಅವರು ಪಾಲಕರಿಗೆ ತಲುಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಲಿಖಿತ ಪತ್ರವನ್ನೂ ಸಹ ಬರೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243