ರಾಜಕೀಯ

ಲೋಕಸಭಾ ಚುನಾವಣೆ | ಬೀದರ್ ನಿಂದ ರಾಹುಲ್ ಕಣಕ್ಕೆ

Published

on

ಸುದ್ದಿದಿನ ಡೆಸ್ಕ್ | ಸೋಲಿನ ಭೀತಿಯಿಂದ ಪಾರಾಗಲು ಅಮೇಥಿಯಿಂದ ಬೀದರ್ ಗೆ ಶಿಪ್ಟ್ ಆಗಿದೆ ಕಾಂಗ್ರೆಸ್ ಪಾಲಿಟಿಕ್ಸ್ ‌ ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಗೆ ರಾಜ್ಯದಿಂದ ಕಣಕ್ಕೆ ಇಳಿಯಲಿದ್ದಾರೆ. ಅಮೇಥಿಯಿಂದ ಕಣಕ್ಕಿಳಿದರೆ ಸೋಲುವ ಭೀತಿ ಎದುರಾಗಲಿದೆ ಎಂದು ಸರ್ವೇ ವರದಿ ಬಹಿರಂಗ ಬಡಿಸಿದೆ.

ರಾಜ್ಯದ ಬೀದರ್ ಲೋಕ ಸಭಾ ಚುನಾವಣೆಯಿಂದ ಕಣಕ್ಕಿಳಿಯಲು ರಾಹುಲ್ ತೀರ್ಮಾನ ಮಾಡಿದ್ದಾರೆ. ತನ್ನ ಅಜ್ಜಿ ಇಂದಿರಾಗಾಂಧಿಗೆ ರಾಜ್ಯದಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ, ಹಾಗಾಗೀ ತನಗೂ ಕರ್ನಾಟಕದಿಂದ ಕಣಕ್ಕಿಳಿದ್ರೆ ರಾಜಕೀಯ ದೆಸೆ ಬದಲಾಗಬಹುದು ಅನ್ನೋ ಕಾರಣಕ್ಕೆ ಬೀದರ್ ನಿಂದ ಕಣಕ್ಕಿಳಿಯಲು ತೀರ್ಮಾನ ತೆಗೆದುಕೊಂಡಿದ್ದಾರೆ.

ಇದರ ಮೊದಲ ಹಂತದ ತಯಾರಿಯಂತೆ ಇಂದು ಬೀದರ್ ನಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ.ಲೋಕ ಸಭಾ ಚುನಾವಣಾ ತಯಾರಿ ಕಾರ್ಯಕ್ರವನ್ನು ಬೀದರ್ ನಿಂದಲೇ ಆರಂಭ ಮಾಡಿದ್ದು, ಅಲ್ಲದೇ ಹೈದ್ರಾಬಾದ್ ಕರ್ನಾಟಕಕ್ಕೆ 371ಜೆ ಕೊಟ್ಟಿದ್ದು ಯುಪಿಎ ಕಾಲದಲ್ಲೇ ಆಗಿದ್ದು, ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಿದ್ದು ನಾವೇ ಎನ್ನುವ ಮೂಲಕ ಪ್ರಚಾರ ಮಾಡಬಹುದು ಅನ್ನೋ ಕಾರಣಕ್ಕೆ ಬೀದರ್ ಜಿಲ್ಲೆಯಲ್ಲಿರುವ ಐದು ಕ್ಷೇತ್ರಗಳಲ್ಲಿ ನಾಲ್ಕು ಕಾಂಗ್ರೆಸ್ ಗೆದ್ದಿದೆ.

ಬೀದರನಲ್ಲಿ ಸದ್ಯ ಧರ್ಮಸಿಂಗ್ ಪುತ್ರ ವಿಜಯಸಿಂಗ್ ಎಂಎಲ್ಸಿಯಾಗಿದ್ದಾರೆ. ಈ ಹಿಂದೆ ಬಿಜೆಪಿಯ ಭಗವಂತ ಖೂಬಾ ಗೆದ್ದಿದ್ದರು, ಧರ್ಮಸಿಂಗ್ ಸೋತಿದ್ರು.ಹಾಗಾಗೀ ಬೀದರ್ ನಿಂದ ಕಣಕ್ಕಿಳಿದ್ರೆ ರಾಹುಲ್ ಗೆ ಗೆಲುವು ಸಾಧ್ಯ ಅನ್ನೋ ಕಾರಣಕ್ಕೆ ಅಲ್ಲಿಂದ ಕಣಕ್ಕಿಳಿಯಲು ತಯಾರಿನಡೆದಿದೆ.ಎಲ್ಲಾ ರಾಜ್ಯ ನಾಯಕರಿಗೆ ರಾಹುಲ್ ಗೆಲ್ಲಿಸಲು ಕೆಲಸ ಮಾಡಲು ಸೂಚನೆ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version