ರಾಜಕೀಯ
ಇದು ಸ್ವಾಭಿಮಾನಿ ಮಂಡ್ಯ ಜನತೆ ಗೆಲುವು : ಸುಮಲತಾ
ಸುದ್ದಿದಿನ, ಮಂಡ್ಯ : ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಗೆಲುವು ಸಾಧಿಸಿದ್ದಾರೆ.
ಜಯಭೇರಿ ಬಾರಿಸುತ್ತಿದ್ದಂತೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ, ಇದು ನನ್ನ ಗೆಲುವಲ್ಲ ಸ್ವಾಭಿಮಾನಿ ಮಂಡ್ಯ ಜನತೆಯ ಗೆಲುವು. ಅಂಬರೀಷ್ ಮೇಲಿನ ಪ್ರೀತಿಯಿಂದ ನನ್ನನ್ನು ಜನ ಗೆಲ್ಲಿಸಿದ್ದಾರೆ. ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಹಾಗೇ ಸಂಸತ್ ಗೆ ಪ್ರವೇಶಮಾಡುತ್ತಿರುವ ಅವರು ಜನತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243