ದಿನದ ಸುದ್ದಿ
ದಾವಣಗೆರೆ | ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಲೋಕೇಶ್ ನೇಣಿಗೆ ಶರಣು
ಸುದ್ದಿದಿನ,ದಾವಣಗೆರೆ: ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಲೋಕೇಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಪಿ.ಬಿ. ರಸ್ತೆ ಭರತ್ ಡಾಬಾ ಬಳಿಯ ಬೀಡಾ ಅಂಗಡಿ ಮಾಲೀಕರಾಗಿದ್ದರು.ಪ್ರತಿ ವರ್ಷವೂ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದರು.
ಮೃತ ಲೋಕೇಶ ದಾವಣಗೆರೆಯಲ್ಲಿ ಬಹುತೇಕರಿಗೆ ಚಿರಪರಿಚಿತರಾಗಿದ್ದು, ಅಪಾರ ಸಂಖ್ಯೆಯ ಸ್ನೇಹಿತ ಬಳಗವನ್ನು ಹೊಂದಿದ್ದರು. ಲೋಕೇಶ್ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243