ದಿನದ ಸುದ್ದಿ

ಲವ್ ಜಿಹಾದ್ ವಿರುದ್ಧ ಸಹಾಯವಾಣಿ

Published

on

ಸುದ್ದಿದಿನ,ದಾವಣಗೆರೆ: ಶ್ರೀ ರಾಮಸೇನೆ, ಕರ್ನಾಟಕ ವತಿಯಿಂದ ಲವ್ ಜಿಹಾದಿಗಳೇ ಎಚ್ಚರ, ಕೊಡುವೆವು ಉತ್ತರ ಎನ್ನುವ ಘೋಷಣೆಯೊಂದಿಗೆ ಲವ್ ಜಿಹಾದಿನಲ್ಲಿ ಸಿಲುಕಿ ಸಂಕಷ್ಟ ಪಡುತ್ತಿರುವವರ ಅನುಕೂಲಕ್ಕಾಗಿ ರಾಜಾದ್ಯಂತ 24*7 ಸಹಾಯವಾಣಿ 9090443444 ಯಾವುದೇ ಕಡೆಗಳಿಂದ ಕರೆ ಬಂದರೂ ಸಹ ತಕ್ಷಣವೇ ಸಹಾಯ ಮಾಡಲಾಗುವುದು ಎಂದು ಶ್ರೀ ರಾಮಸೇನೆಯ ರಾಜಾಧ್ಯಕ್ಷ ಗಂಗಾಧರ ಜಿ.ಕುಲಕರ್ಣಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬುಧವಾರ ರಾಜ್ಯದ ಆರು ಕಡೆಗಳಲ್ಲಿ ಏಕಕಾಲದಲ್ಲಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ಕಲಬುರಗಿಯಲ್ಲಿ ಸಿದ್ದಲಿಂಗ ಸ್ವಾಮಿ, ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್, ದಾವಣಗೆರೆಯಲ್ಲಿ ಗಂಗಾಧರ ಕುಲಕರ್ಣಿ, ಬೆಂಗಳೂರು, ಮಂಗಳೂರು, ಬಾಗಲಕೋಟೆ ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದೆ. ಲವ್‌ ಜಿಹಾದ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರೆಗಳನ್ನು ಮಾತ್ರ ಸ್ವೀಕರಿಸಲಾಗುವುದು. ಕರೆ ಮಾಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು ಎಂದು ಹೇಳಿದರು.

ಹಿಂದೂ ಯುವತಿಯರಿಗೆ ಜಾಲ ಬೀಸಲು ಮುಸ್ಲಿಂ ಯುವಕರಿಗೆ ತರಬೇತಿ ನೀಡಿ, ಮುಸ್ಲಿಂ ಹುಡುಗರು ಹಿಂದು ಹೆಸರಿನಲ್ಲಿ ಹಿಂದು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಾ, ಮೋಸದ ಪ್ರೀತಿ, ಆಕರ್ಷಕ ಉಡುಗೊರೆ ಕೊಡುವ ಮೂಲಕ ಲವ್ ಜಿಹಾದ ನ ಮೊದಲ ಹೆಜ್ಜೆ ಆರಂಭಿಸುತ್ತಾರೆ. ಬಲೆಗೆ ಬಿದ್ದ ಹಿಂದು ಯುವತಿಯರಿಗೆ ಡ್ರಗ್ಸ್ ಮದ್ಯಪಾನ, ವಶೀಕರಣ, ಬ್ಲಾಕ್ ಮೇಲ್, ಅಶ್ಲೀಲ ಫೆÇಟೋ, ವಿಡಿಯೋ ಸೇರಿದಂತೆ ಇನ್ನಿತರೆ ಮಾರ್ಗಗಳ ಮೂಲಕ ವಶದಲ್ಲಿಟ್ಟುಕೊಳ್ಳುವ ಕುತಂತ್ರ ನಡೆಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಲ್ಲದೇ ಆಸ್ತಿ ಕಬಳಿಕೆ, ನಿಕಾಹ, ಬುರ್ಖಾ, ಹಿಜಾಬ್, ಗೋಮಾಂಸ ಭಕ್ಷಣೆ, ನಮಾಜ ಮುಂತಾದವುಗಳ ಮೂಲಕ ಹಿಂದು ಯುವತಿಯರನ್ನು ಇಸ್ಲಾಮಿಗೆ ಮತಾಂತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದೆಲ್ಲದರ ನಂತರ ಕೊನೆ ಹಂತದಲ್ಲಿ ಭಯೋತ್ಪಾದನೆಗೆ, ಗೂಡಚಾರ್ಯಕ್ಕೆ, ವೇಶ್ಯಾವಾಟಿಕೆಗೆ ಬಳಸಿಕೊಂಡು ಹಿಂದೂ ಯುವತಿಯರ ಜೀವನ ಹಾಳು ಮಾಡುಲಾಗುತ್ತಿದೆ. ಇಸ್ಲಾಂ ಜನಸಂಖ್ಯೆ ಹೆಚ್ಚಳಕ್ಕೆ, ವಿದೇಶಕ್ಕೆ ವೇಶ್ಯಾವಾಟಿಕೆಗೆ ಮಾರಾಟಕ್ಕೆ ಲವ್ ಜಿಹಾದ್ ಕೆಲಸ ಮಾಡುತ್ತಿದೆ. ಇದಕ್ಕೆ ಒಪ್ಪದಿದ್ದರೆ ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇದೆಲ್ಲದರ ನಿಯಂತ್ರಣ, ಅಂತ್ಯಕ್ಕೆ ಶ್ರೀ ರಾಮಸೇನೆ ಮುಂದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಪರಶುರಾಮ ನಡುಮನಿ, ಪಿ.ಸಾಗ‌ರ್, ಬಿ.ಜಿ.ರಾಹುಲ್‌, ಶ್ರೀಧರ್, ಶಿವರಾಜ್ ಪೂಜಾ‌ರ್, ಸುನೀಲ್ ವಾಲಿ, ರಾಜು, ಸಿದ್ದಾರ್ಥ, ವಿನಯ್, ಶಶಿಕುಮಾ‌ರ್ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version