ದಿನದ ಸುದ್ದಿ
ವಿಶಾಖಪಟ್ಟಣದಲ್ಲಿ ಗ್ಯಾಸ್ ಸೋರಿಕೆ : ಏರುತ್ತಿದೆ ಸಾವಿನ ಸಂಖ್ಯೆ
ಸುದ್ದಿದಿನ ಡೆಸ್ಕ್ : ಆಂಧ್ರಪ್ರದೇಶದಲ್ಲಿರುವ ವಿಶಾಖಪಟ್ಟಣದಲ್ಲಿ ಎಂದು LPG ಗ್ಯಾಸ್ ಸೋರಿಕೆಯಿಂದ ಐದು ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಎಲ್ಲೆಲ್ಲೂ ತಲೆಸುತ್ತಿ ಬೀಳುತ್ತಿರುವ ಜನರು, ಈಗಾಗಲೇ ಹತ್ತು ಜನ ಸಾವನ್ನಪ್ಪಿದ್ದಾರೆ. ಮುನ್ನೂರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 9 ಗ್ರಾಮಗಳಿಗೆ ಈ ಅನಿಲ ಗಾಳಿಯಲ್ಲಿ ಬೆರೆತು ಹೋಗಿದೆ.
ಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣಂ ಬಳಿಯಿರುವ LPG ಪಾಲಿಮರ್ಸ್ ಕಂಪನಿಯಲ್ಲಿ ನಡೆದಿರುವ ಘಟನೆ. ಈ ಅನಾಹುತದಿಂದ ಗಾಳಿಯಲ್ಲಿ ವಿಷ ಸೇರಿದೆ ಹಾಗೂ ನೀರನ್ನು ಸಹ ಕೊಡಬಾರದು ಎಂದು ವೈದ್ಯರು ಹೇಳಿದ್ದಾರೆ.
ಎಲ್ಲಾ ಕಡೆ ವಿಷದ ಅನಿಲ ಬೆರೆತಿರುವುದರಿಂದ ಯಾರೂನೂ 5 ಕಿಲೋಮೀಟರ್ ವರೆಗೂ ಕೆರೆ ಬಾವಿ ನಲ್ಲಿಯ ನೀರನ್ನು ಕುಡಿಯುವಂತಿಲ್ಲ ಹಾಗೂ ಪ್ರಾಣಿ ಪಕ್ಷಿಗಳು ಸಹ ಅಲ್ಲಲೇ ಪ್ರಜ್ಞೆತಪ್ಪಿ ಬೀಳುತ್ತಿದ್ದಾರೆ.ಈಗ ಅನಿಲ ಸೋರಿಕೆ ಸದ್ಯದ ಮಟ್ಟಿಗೆ ನಿಂತಿದೆ ಮತ್ತು ಈಗಾಗಲೇ ಗಾಳಿಯಲ್ಲಿ ಬೆಳೆದಿರುವ ವಿಷದ ಅನಿಲವನ್ನು ಶುದ್ಧೀಕರಿಸಬೇಕಿದೆ.
ವರದಿ: ದಿವ್ಯಶ್ರೀ. ವಿ
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243