ದಿನದ ಸುದ್ದಿ
ಆನ್‌ಲೈನ್ ತರಗತಿ | ಪೋಷಕರಿಂದ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಖಂಡನೀಯ : ಎಂ. ನಾರಾಯಣಸ್ವಾಮಿ
ಸುದ್ದಿದಿನ,ಬೆಂಗಳೂರು :ರಾಜ್ಯ ಸರ್ಕಾರ ಈವರೆಗೂ ಕೂಡ ಶಾಲೆ ಕಾಲೇಜುಗಳ ತರಗತಿ ನಡೆಸಲು ಅವಕಾಶ ನೀಡುವ ಬಗ್ಗೆಯೇ ಗೊಂದಲದಲ್ಲಿರುವಾಗ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಆನ್‌ಲೈನ್ ತರಗತಿಗಳನ್ನು ಪಡೆಯಲು ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಖಂಡನೀಯ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಪೋಷಕರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಎಂಟು ತಿಂಗಳಿನಿಂದ ಶಾಲೆಗಳು ತೆರೆಯದೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದು ಮಕ್ಕಳಿಗಿಂತ ಪೋಷಕರೇ ಪಾಠ ಕೇಳುವಂತಾಗಿದೆ.
ಇಷ್ಟೆಲ್ಲಾ ಗೊಂದಲಗಳ ನಡುವೆಯೇ ಶುಲ್ಕ ವಸೂಲಿಗೆ ಮುಂದಾಗಿರುವುದು ಅಮಾನವೀಯ ಸರ್ಕಾರ ಜಾತಿಗೊಂದು ನಿಗಮ ಮಂಡಳಿ ರಚಿಸುವುದರ ಬದಲು ಪೋಷಕರ ಸಮಸ್ಯೆಗೆ ಪರಿಹಾರ ನೀಡಲಿ ಎಂದು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243