ದಿನದ ಸುದ್ದಿ
ಚನ್ನಗಿರಿ | ಮಾಡಾಳ್ ಮಲ್ಲಿಕಾರ್ಜುನ್ ಗೆ ಗೆಲುವು..!?
ಸುದ್ದಿದಿನ, ದಾವಣಗೆರೆ: ಪಕ್ಷೇತರರನ್ನು ಆಯ್ಕೆ ಮಾಡುವಲ್ಲಿ ಇತಿಹಾಸ ನಿರ್ಮಿಸಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮತದಾರರು, ಮಾಡಾಳ್ ಮಲ್ಲಿಕಾರ್ಜುನರನ್ನು ಗೆಲ್ಲಿಸುವುದರ ಮೂಲಕ ಇತಿಹಾಸವನ್ನು ಮತ್ತೆ ಮರುಕಳಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಆರುವರ್ಷ ಬಿಜೆಪಿಯಿಂದ ಉಚ್ಚಾಟಿತರಾಗಿದ್ದ ಮಾಡಾಳ್ ಮಲ್ಲಿಕಾರ್ಜುನ್ ಅವರು ಚನ್ನಗಿರಿ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ, ಬಿಜೆಪಿಯು ಟಿಕೆಟ್ ನೀಡಲಿಲ್ಲ. ಈ ಮೊದಲೇ ಚುನಾವಣಾ ಸ್ಪರ್ಧೆಗಿಳಿಯುವ ಉತ್ಸಾಹದಲ್ಲಿದ್ದ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೂ ಬಿಜೆಪಿ ಟಿಕೆಟ್ ಕೈತಪ್ಪಿತು. ಆದ್ದರಿಂದ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಚನ್ನಗಿರಿ ಕ್ಷೇತ್ರವು ಪಕ್ಷೇತರರನ್ನು ಆಯ್ಕೆ ಮಾಡಿದ ಇತಿಹಾಸ ಹೊಂದಿದ್ದು, ಈ ಹಿಂದೆ ಈಗ ಕಾಂಗ್ರೆಸ್‌ನಲ್ಲಿರುವ ವಡ್ನಾಳ್ ರಾಜಣ್ಣ ಪಕ್ಷೇತರರಾಗಿ ನಿಂತು ಆಗ ಮುಖ್ಯಮಂತ್ರಿ ಆಗಿದ್ದ ಜೆ.ಎಚ್. ಪಟೇಲ್ ಅವರನ್ನು ಸೋಲಿಸಿದ್ದರು. ಈಗ ಮಾಡಾಳ್ ಮಲ್ಲಿಕಾರ್ಜುನ್ ಅವರ ಪೈಪೋಟಿಯು ಮೂರು ಪಕ್ಷಗಳ ಜತೆ ಜೋರಾಗಿದ್ದು ಮತ್ತೆ ಇತಿಹಾಸ ಮರುಕಳಿಸಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ನಾಳೆ ವರೆಗೂ ಕಾದು ನೋಡೋಣ..?
ಸುದ್ದಿದಿನ.ಕಾಂ|ವಾಟ್ಸಾಪ್|9980346243