ದಿನದ ಸುದ್ದಿ
ಮದ್ದೂರು ತಾಲ್ಲೂಕಿನಲ್ಲಿ ಮುಂದುವರಿದ ಚಿರತೆ ದಾಳಿ
ಸುದ್ದಿದಿನ, ಮದ್ದೂರು : ಯರಗನಹಳ್ಳಿ ಗ್ರಾಮದ ಕಾಳಲಿಂಗಯ್ಯ ಎಂಬುವವರು ಇಂದು ಸಂಜೆ 6 ಗಂಟೆ ಸಮಯದಲ್ಲಿ ಮೇಕೆಗಳನ್ನು ಮೇಹಿಸುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಒಂದು ಮೇಕೆಯನ್ನು ಹತ್ಯೆ ಮಾಡಿ ಒತ್ತುಯ್ಯವ ವೇಳೆಗೆ ಅಲ್ಲಿಯೇ ಇದ್ದ ಜನಗಳ ಕೂಗಾಟದಿಂದ ಮೇಕೆ ಬಿಟ್ಟು ಓಡಿ ಹೋಗಿದೆ.ಸತತ ಎರಡನೇ ಬಾರಿಗೆ ಕಾಳಲಿಂಗಯ್ಯ ಎಂಬುವವರ ಮೇಕೆಯನ್ನು ಹಿಡಿದು ಹಾಕಿದೆ ಚಿರತೆ.
ಇಪ್ಪತ್ತು ದಿನಗಳಿಂದ ಯರಗನಹಳ್ಳಿ ಗ್ರಾಮದ ಸುತ್ತಮುತ್ತ ಓಡಾಡುತ್ತಿರುವ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನನ್ನು ಇಟ್ಟಿದ್ದರೂ ಸಹ ಅದನ್ನು ಕಣ್ತಪ್ಪಿಸಿ ಇಲ್ಲಿಯವರೆಗೂ ಎರಡು ಮೂರು ಮೇಕೆಗಳನ್ನು ತಿಂದು ಹಾಕಿದೆ ಚಿರತೆ. ಚಿರತೆ ನೋಡಿ ಗಾಬರಿಗೊಂಡು ಅಸ್ವಸ್ಥರಾಗಿರುವ ಕಾಳಲಿಂಗಯ್ಯ ರವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಸುಮಾರು ಒಂದು ವಾರದ ಹಿಂದೆಯೇ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲನೆ ಮಾಡದೇ ಕಚೇರಿಯಲ್ಲೂ ಸಹ ಸಿಗದೇ ನಿರ್ಲಕ್ಷ್ಯ ವಹಿಸುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401