ದಿನದ ಸುದ್ದಿ
ಮದ್ದೂರು ತಾಲ್ಲೂಕು ಕಛೇರಿಗೆ ನೂತನ ತಹಶೀಲ್ದಾರ್
ಸುದ್ದಿದಿನ ಡೆಸ್ಕ್ : ಮದ್ದೂರು ತಾಲ್ಲೂಕು ಕಛೇರಿಗೆ ನೂತನ ಪ್ರಭಾರ ತಹಶೀಲ್ದಾರ್ ಆಗಿ ಎನ್.ಶ್ವೇತಾ ರವರು ಇಂದು ಅಧಿಕಾರ ಸ್ವೀಕರಿಸಿದರು.
ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ರವರನ್ನು ಬೇರೆ ಕಡೆಗೆ ವರ್ಗಾವಣೆ ಆದ ಕಾರಣ ನೂತನ ತಹಶೀಲ್ದಾರ್ ರವರಿಗೆ ಮಹೇಶ್ ರವರು ಅಧಿಕಾರ ಹಸ್ತಾಂತರ ಮಾಡಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಈಚೆಗೆ ನಾಲ್ಕರಿಂದ ಐದು ಜನ ತಹಶೀಲ್ದಾರ್ ಗಳು ವರ್ಗಾವಣೆ ಗೊಂಡಿದ್ದು ತಾಲ್ಲೂಕು ಕಛೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ವಿಧವಾ ವೇತನ, ವೃದ್ದಾಪ್ಯ ವೇತನ , ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು,ಆಧಾರ್ ಕಾರ್ಡ್ ನೋಂದಣಿ, ಇನ್ನು ಮುಂತಾದ ಸಮಸ್ಯೆಗಳಿದ್ದು ಇವೆಲ್ಲದಕ್ಕೂ ನೂತನ ತಹಶೀಲ್ದಾರ್ ರವರು ತಕ್ಷಣವೇ ಎಚ್ಚೆತ್ತುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸ ಬೇಕೆಂದು ಆಗ್ರಹಿಸಿದ್ದಾರೆ.