ರಾಜಕೀಯ
ಬಿಜೆಪಿ ಸಚಿವನಿಂದ ಬಿಜೆಪಿ ಶಾಸಕಿಗೆ ಕಿರುಕುಳ !
ಭೋಪಾಲ್: ಮಧ್ಯಪ್ರದೇಶದ ಲ್ಲಿ ಸಚಿವನೊಬ್ಬ ಬಿಜೆಪಿ ಪಕ್ಷದ ಶಾಸಕಿಗೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ಶಾಸಕಿ ನೀಲಮ್ ಮಿಶ್ರಾ ಅವರು ವಿಧಾನಸಭೆಯಲ್ಲಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಸಚಿವನೊಬ್ಬ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಕಿರುಕು ನೀಡುತ್ತಿದ್ದಾನೆ. ಆದ್ದರಿಂದ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಗಣಿಗಾರಿಕೆ ಮತ್ತು ಕೈಗಾರಿಕೆ ಸಚಿವ ರಾಜೇಂದ್ರ ಶುಕ್ಲಾ ಅವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದು, ಈ ಕುರಿತು ಧ್ವನಿ ಎತ್ತಿದ್ದಕ್ಕೆ ಈಗ ನನ್ನ ಮೇಲೆ ಕಿರುಕುಳ ಆರಂಭಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಶಾಸಕಿ ನೀಲಮ್ ಮಿಶ್ರಾ ಗಂಭೀರ ಆರೋಪ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಈ ಆರೋಪಿ ತಳ್ಳಿ ಹಾಕಿರುವ ಸಚಿವ ರಾಜೇಂದ್ರ ಶುಕ್ಲಾ ಅವರು, ಮುಂದೆ ಶಾಸಕಿ ನೀಲಮ್ ಮಿಶ್ರಾ ಕಾಂಗ್ರೆಸ್ ಪಕ್ಷದ ಒಲವು ಗಳಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.