ದಿನದ ಸುದ್ದಿ
ಕೊಡಗು ಪ್ರವಾಹ ಹಿನ್ನೆಲೆ ಜನಾಕರ್ಷಣೆ ಕಳೆದುಕೊಂಡ ಐತಿಹಾಸಿಕ ದಸರಾ
ಸುದ್ದಿದಿನ ಡೆಸ್ಕ್ : ಮಡಿಕೇರಿ ದಸರಾ ಮೇಲೆ ಪ್ರಕೃತಿ ವಿಕೋಪ ಸೈಡ್ ಇಫೆಕ್ಟ್ ಕಾರಣ ಕಳೆಗುಂದಿತ್ತು ಐತಿಹಾಸಿಕ ದಸರಾ. ಮಡಿಕೇರಿಯತ್ತ ಮುಖ ಮಾಡದ ಪ್ರವಾಸಿಗರಿಲ್ಲದೆ ಬಣಗುಡುತ್ತಿತ್ತು ಮಡಿಕೇರಿ ನಗರ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಡಗರ ಸಂಭ್ರಮವಿಲ್ಲದೆ ಮಂಕಾಗಿತ್ತು ವ್ಯಾಪಾರ ವಹಿವಾಟು, ಪ್ರವಾಸೋಧ್ಯಮ. ಮೈಸೂರು ದಸರಾ ಬಳಿಕ ಪ್ರವಾಸಿಗರು ಮಡಿಕೇರಿ ಆಗಮಿಸುವ ನಿರೀಕ್ಷೆ ಇದ್ದು, ರಾತ್ರಿ ದಶಮಂಟಪಗಳ ಶೋಭಾಯಾತ್ರೆ ನಡೆಯಿತು.
ವಿದ್ಯುತ್ ದೀಪಗಳಿಂದ ಜಗಮಗಿಸಿದವು ದಶಮಂಟಪಗಳು.ಬದಶಮಂಟಪಗಳಲ್ಲಿ ಪೌರಾಣಿಕ ಕಥಾನಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೇವಲ ಒಂದು ದಿನಕ್ಕೆ ಸೀಮಿತವಾದ ಮನರಂಜನಾ ಕಾರ್ಯಕ್ರಮವದಾಗಿತ್ತಷ್ಟೆ. ಅಲ್ಲದೆ ಎಲ್ಲಾ ಬಗೆಯ ಸ್ಪರ್ಧೆಗಳೂ ರದ್ದುಗೊಳಿಸಲಾಗಿತ್ತು.ಆದ್ದರಿಂದ ಜನಾಕರ್ಷಣೆ ಕಳೆದುಕೊಂಡಿತು ಐತಿಹಾಸಿಕ ದಸರಾ.