ನಿತ್ಯ ಭವಿಷ್ಯ

ಮದುವೆ ಆಗಿ ವರ್ಷಗಳೇ ಕಳೆದಿದ್ರು, ಇನ್ನೂ ಮಕ್ಕಳಾಗಿಲ್ವಾ..? ಜೋತಿಷ್ಯಶಾಸ್ತ್ರದ ಪ್ರಕಾರ ನಿಮಗಿದೆಯಾ ಪುತ್ರ ಫಲ..? ನಿಮ್ಮ ಜನ್ಮ ಕುಂಡಲಿಯಲ್ಲಿ ನಿಮ್ಮ ಭವಿಷ್ಯ..!

Published

on

ದುವೆ ಆಗಬೇಕು, ಮಕ್ಕಳು ಪಡೆಯಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಈ ಕನಸು ಪ್ರತಿಯೊಬ್ಬರಿಗೂ ನಿಜವಾಗಲೂ ನೆರವೇರುತ್ತ..? ಖಂಡಿತ ಇಲ್ಲ. ಕೆಲವರ ಜೀವನದಲ್ಲಿ ಮದುವೆ ಅನ್ನೋದೆ ಒಂದು ಕನಸಾದ್ರೆ, ಮಕ್ಕಳು ಅನ್ನೋದು ಗಗನ ಕುಸುಮ. ಮದುವೆ ಆಗಿ ಹೊಸ ಕನಸುಗಳನ್ನ ಹೊತ್ತು ಹೊಸ ಜೀವನ ಆರಂಭಿಸುವ ಅದೆಷ್ಟೋ ಜೋಡಿಗಳು ಮುಂದೆ ಮಕ್ಕಳಾಗದೆ ಪರಿತಪಿಸುವುದನ್ನ ನಾವು ನೀವೆಲ್ಲ ನೋಡಿದ್ದೆವೆ.

ಮದುವೆಯಾದ ಆರಂಭದಲ್ಲಿ ಉಲ್ಲಾಸದ ಜೀವನವನ್ನೇನೊ ಕಳೆಯುತ್ತಿರಿ. ಆದ್ರೆ ಮುಂದೆ ಎರಡು ಮೂರು ವರ್ಷ ಕಳೆಯುವಷ್ಟರಲ್ಲಿ ನಿಮ್ಮನ್ನ ಕಾಡುವ ಸಂಕಟ ಅಂದ್ರೆ ಅದು ಮಕ್ಕಳಿಲ್ಲದ ಸಂಕಟ. ನೆಟ್ಟರಿಷ್ಟರು, ಬಂಧು ಬಳಗದವರು ಎದುರಾಗಿ, ಎರಡು ವರ್ಷ ಆಯ್ತು..ಮೂರು ವರ್ಷ ಆಯ್ತು ಇನ್ನೂ ಮಕ್ಕಳಾಗಿಲ್ವ ಅಂತಾ ಕೇಳೋಕೆ ಶುರು ಮಾಡಿದಾಗ ನೋಡಿ ನಿಜವಾದ ಸಂಕಟ ಆರಂಭ ಆಗೋದು.

ಆಗ ನೀವು ಮಾಡುವ ಮೊದಲ ಕೆಲಸವೇ ದೇವರ ಮೊರೆ ಹೋಗುವ ಜೊತೆಗೆ.. ವೈದ್ಯರ ಭೇಟಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿರಿ. ಹೀಗೆ ವೈದ್ಯರ ಮೊರೆ ಹೊದ ಅದೆಷ್ಟೋ ದಂಪತಿಗಳಲ್ಲಿ ಯಾವೂದೆ ನ್ಯೂನ್ಯತೆ ಇರುವುದೇ ಇಲ್ಲ… ಆದ್ರೂ ಕೂಡ ಆ ದಂಪತಿಗಳಿಗೆ ಮಕ್ಕಳ ಫಲ ಇರುವುದಿಲ್ಲ. ಇಂತಹ ದಂಪತಿಗಳಿಗೆ ನಮ್ಮ ಪುರಾತನ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ.

*ಜನ್ಮ ಕುಂಡಲಿಯಲ್ಲಿದೆ ಪರಿಹಾರ*
ವೈದ್ಯಕೀಯವಾಗಿ ಆರೋಗ್ಯವಂತರಾಗಿದ್ದು, ಮಕ್ಕಳಿಲ್ಲದೆ ಪರಿತಪಿಸುತ್ತಿರುವ ದಂಪತಿಗಳು ತಮ್ಮ ಜನ್ಮಕುಂಡಲಿ ಸಹಾಯದಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂದ್ರೆ ಖಂಡಿತವಾಗಿಯೂ ಮಕ್ಕಳ ಫಲವನ್ನ ಪಡೆಯಬಹುದು.

ಲಗ್ನದಿಂದ ಪಂಚಮ ಸ್ಥಾನ ನೋಡಿ, ಪಂಚಮ ಸ್ಥಾನಕ್ಕೆ ಯಾರು ಅಧಿಪತಿ.. ಶುಭಗ್ರಹಗಳು ಯಾವು.. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯ ಸ್ಥಾನ ನೋಡಿಕೊಂಡು ಏಕರಾಶಿಯಲ್ಲಿ ಕೂಡಿರಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಯಾವುದೇ ಕಾರಣಕ್ಕೂ ಪರಿವರ್ತನೆಯಾಗಿ ಇರಬಾರದು, ಇಂತಹ ಸಂದರ್ಭಗಳಲ್ಲಿ ದಂಪತಿಗಳಿಗೆ ಸಂತಾನಭಾಗ್ಯ ಲಭಿಸುವುದು.

ಅಷ್ಟೇ ಅಲ್ಲದೇ ನಿಮ್ಮ ಲಗ್ನ ಸ್ಥಾನದಲ್ಲಿ ಗುರು ಮತ್ತು ಪಂಚಮ ಸ್ಥಾನದಲ್ಲಿ ಗುರುಬಲ ಇದ್ದರೆ ಸಂತತಿ ಭಾಗ್ಯ ಲಭಿಸುತ್ತದೆ. ಇನ್ನೂ ನಿಮ್ಮ ಜನ್ಮ ಕುಂಡಲಿಯಲ್ಲಿ ಮಕ್ಕಳ ಫಲ ಪಡೆಯಲು ಅನುಕೂಲಕರವಾಗಿ ಇರಲಿಲ್ಲ ಅಂದ್ರು ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ ನಮ್ಮ ಪೂರ್ವಿಕರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನ ಸೂಚಿಸಿದ್ದಾರೆ. ಈ ಪರಿಹಾರಗಳಿಂದ ನಿಮ್ಮ ಮೇಲೆ ದೈವಾನುಗ್ರಹ ಆಗುವುದರ ಜೊತೆಗೆ ಸಂತಾನ ಫಲ ನಿಮ್ಮದಾಗಲಿದೆ.
-ಶುಭಮಸ್ತು

ಪರಿಹಾರಕ್ಕಾಗೆ ಸಂಪರ್ಕಿಸಿ:

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

Trending

Exit mobile version