ದಿನದ ಸುದ್ದಿ
ಮಹದಾಯಿ ವಿಚಾರ; ಹಸಿರು ಪೀಠಕ್ಕೆ ಹೋಗಲು ಸಿದ್ಧತೆ
ಸುದ್ದಿದಿನ ಡೆಸ್ಕ್: ಮಹಾದಾಯಿ ವಿಚಾರದಲ್ಲಿ ಗೋವಾ ಹಸಿರು ನ್ಯಾಯಾಧೀಕರಣಕ್ಕೆ ಹೋಗಲು ಚಿಂತನೆ ನಡೆಸಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ವಾರದಲ್ಲೆ ದೊಡ್ಡ ಅಧಿಕಾರಿಗಳ ತಂಡ ಮಹದಾಯಿ ಭೇಟಿ ಮಾಡ್ತೀವಿ. ಸ್ಥಳ ಪರಿಶೀಲನೆ ಬಳಿಕ ಸಿಎಂ ಜೊತೆ ಸಭೆ ಮಾಡ್ತೀವಿ. ಬಳಿಕ ಮುಂದಿನ ಹೋರಾಟ ಸಿದ್ದತೆ ಮಾಡ್ತೀವಿ ಎಂದು ಹೇಳಿದರು.
ಗೋವಾ ಏನಾದ್ರು ಮಾಡಿಕೊಳ್ಳಲಿ. ನಮ್ಮ ರಾಜ್ಯದ ಹಿತ ಕಾಪಾಡಲು ನಾವು ಏನು ಬೇಕಾದ್ರು ತ್ಯಾಗ ಮಾಡಲು ಸಿದ್ದ. ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ. ಎಲ್ಲಾ ಪಕ್ಷದ ಮುಖಂಡರಿಗೆ ಕೈ ಮುಗಿದು ಕೇಳಿಕೊಳ್ತೀನಿ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಕೈ ಮುಗಿತೀನಿ ಇದ್ರಲ್ಲಿ ರಾಜಕೀಯ ಮಾಡೋದು ಬೇಡ.
ನಾವು ಒಟ್ಟಾಗಿ ಹೋರಾಟ ಮುಂದುವರೆಸೋಣ. ಒಂದು ತೊಟ್ಟು ನೀರು ಉಳಿಸಿಕೊಳ್ಳಲು ಒಟ್ಟಾಗಿ ಒಗ್ಗಟ್ಟಿನಿಂದ ನಾವು ಹೋರಾಟ ಮಾಡೋಣ. ವಿಪಕ್ಷಗಳಿಗೆ ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.