ದಿನದ ಸುದ್ದಿ
ಮಹದಾಯಿ ಯೋಜನೆ ಜಾರಿಗೆ ; 2 ನೇ ಹಂತದ ಹೋರಾಟಕ್ಕೆ ಸಜ್ಜು
ಸುದ್ದಿದಿನ ಡೆಸ್ಕ್ |ಮಹದಾಯಿ ಯೋಜನೆ ಜಾರಿಗೆ ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರ ಸುಪ್ರಿಂಗೆ ಮೇಲ್ಮನವಿ ಸಲ್ಲಿಸಲಿ ಇಲ್ಲ ನಾವೇ ಸಲ್ಲಿಸ್ತೇವೆ ಎಂದು ಹೋರಾಟಗಾರರು ಸಿಡಿದೆದ್ದಿದ್ದಾರೆ.
ಮಹದಾಯಿ ನೀರು ಮಲಪ್ರಭಾ ನದಿಗೆ ಸೇರೋವರೆಗೂ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದ್ದ ಎಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಹೋರಾಟಗಾರ ವೀರೇಶ್ ಸೊಬರದಮಠ ತಿಳಿಸಿದ್ದಾರೆ.
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ 3 ವರ್ಷದಿಂದ ನಡೆಯುತ್ತಿರೋ ಹೋರಾಟ ಸಮಾಧಾನ ತರದಿದ್ರೂ 13 ಟಿಎಂಸಿ ನೀರು ಸಿಕ್ಕಿದ್ದಕ್ಕೆ ಸಂಭ್ರಮ ವ್ಯಕ್ತ ಪಡಿಸಿದ್ದು, ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆಯರು, ರೈತರು. ಬಾಬಾಸಾಹೇಬ್ ವೃತ್ತದಿಂದ ಮಹದಾಯಿ ಹೋರಾಟದ ವೇದಿಕೆವರೆಗೆ ಬೃಹತ್ ಮೆರವಣಿಗೆ ಸಾಗಿತು. ಈ ಸಮಯದಲ್ಲಿ ಹಸಿರು ಟವೆಲ್ ಹಾರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ ರೈತರು.
ಸುದ್ದಿದಿನ.ಕಾಂ | ವಾಟ್ಸಾಪ್ | 9986715401