ದಿನದ ಸುದ್ದಿ
ದಾವಣಗೆರೆ | ಪಾಲಿಕೆವತಿಯಿಂದ ದಂಡ ವಸೂಲಿ
ಸುದ್ದಿದಿನ,ದಾವಣಗೆರೆ : ಮಹಾನಗರ ಪಾಲಿಕೆಯ ಆಯುಕ್ತರ ಮಾರ್ಗದರ್ಶನದಲ್ಲಿ ಮೇ.11 ರಂದು ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಆರೋಗ್ಯ ನಿರೀಕ್ಷಕರುಗಳಾದ ಹರೀಶ್ ಕೆ.ಎನ್. ನಿಖಿಲ್ ಜೆ.ಹೆಚ್. ಮಲ್ಲಿಕಾ ಗುಡೆಕೋಟೆ ಮತ್ತು ಉಷಾ ಇವರುಗಳ ತಂಡದಿಂದ ದಂಡ ವಸೂಲಿ ನಡೆಯಿತು.
ನಗರದ ಆಂಜನೇಯ ಬಡಾವಣೆ, ಕೆ.ಬಿ. ಬಡಾವಣೆ, ಪಿ.ಜೆ. ಬಡಾವಣೆ, ವಿದ್ಯಾರ್ಥಿ ಭವನ, ಹೂವಿನ ಮಾರುಕಟ್ಟೆ ಮತ್ತಿತರ ಭಾಗಗಳಲ್ಲಿ, ಅಂಗಡಿ, ಬೇಕರಿ, ತಳ್ಳುಗಾಡಿಗಳು, ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಲಲಿತ ಟಿಫನ್ಸ್, ಕಾವೇರಿ ಬೇಕರಿ, ಬಸವರಾಜ, ಶಫಿ, ಅತಾವುಲ್ಲ, ವಿಲಿಯಮ್ಸ್, ಸುಬ್ಬಣ್ಣ, ರವೀಂದ್ರ, ಅಕ್ಕಮಹಾದೇವಿ, ಆನಂದರಾಮ್, ಆರೀಫ್, ತುಳಜಾರಾಮ್, ಶಿವಶಂಕರ್, ಪ್ರಭಾಕರ ಇವರುಗಳಿಂದ ಏಕಬಳಕೆ ಪ್ಲಾಸ್ಟಿಕ್ ನ್ನು ವಶ ಪಡಿಸಿಕೊಂಡು ಇವರುಗಳಿಂದ ಒಟ್ಟು ರೂ.16300/- ಗಳ ದಂಡವನ್ನು ವಸೂಲಿ ಮಾಡಲಾಯಿತು ಎಂದು ಮಹಾನಗರಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಹಾಗೂ ತಾಂತ್ರಿಕ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243