ದಿನದ ಸುದ್ದಿ
ಮಹಾತ್ಮ ಗಾಂಧಿ ‘ಆತ್ಮಚರಿತ್ರೆ’ ಪುಸ್ತಕ ವಿತರಣೆ
ಸುದ್ದಿದಿನ, ಬೆಂಗಳೂರು : ಮಕ್ಕಳಿಗೆ ಮಹಾತ್ಮಾ ಗಾಂಧೀಜಿ ಪರಿಚಯ ಮಾಡಿಕೊಡುವ ಹಿನ್ನೆಲೆಯಲ್ಲಿ ‘ಗಾಂಧಿ ಆತ್ಮಚರಿತ್ರೆ’ ಪುಸ್ತಕವನ್ನ ವಿತರಣೆ ಮಾಡಲಾಯ್ತು. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಲಾಲ್ ಭಾಗ್ ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಎ ಎಸ್ ಬಿ ಸಂಸ್ಥೆಗಳ ಅಧ್ಯಕ್ಷ ಎಸ್ ಭಗೀರಥ ವಿತರಣೆ ಮಾಡಿದ್ರು.
ನಂತರ ಮಾತನಾಡಿದ ಅವ್ರು, ಇಂದಿನ ತಲೆಮಾರಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಬಹಳ ಅವಶ್ಯಕ. ಸೇವೆ ಮತ್ತು ಸಹ ಬಾಳ್ವೆಯ ಪಾಠ ಭೋಧಿಸಿದ ಬಾಪೂಜಿಗೆ “ಬಾಪು ಕುಟೀರದ” ಮೂಲಕ ಪುಷ್ಪ ನಮನವನ್ನು ಎ ಎಸ್ ಬಿ ಸಲ್ಲಿಸುತ್ತಿದೆ. ಬಾಪು ಕುಟೀರದ ಪ್ರಾಯೋಕತ್ವ ವಹಿಸಿಕೊಳ್ಳುವುದು ನಮ್ಮ ಸೌಭಾಗ್ಯವೇ ಸರಿ.
ಇದೇ ರೀತಿ ಇಂದಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನಲೆಯಲ್ಲಿ ಮಹಾತ್ಮ ಗಾಂಧೀಜಿವರ ಆತ್ಮ ಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸುತ್ತಿದ್ದೇವೆ. ಈ ಮಕ್ಕಳು ಗಾಂಧೀಜಿಯವರ ಜೀವನ ದ ಬಗ್ಗೆ ತಿಳಿದುಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಿ ಬೆಳೆಯಲಿ ಎನ್ನು ಆಶಯ ನಮ್ಮದು ಎಂದರು.
ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನಾಚರಣೆಯ ವರ್ಷಾಚರಣೆಯ ಸಂಧರ್ಬದಲ್ಲಿ, ಮುಂದಿನ ದಿನಗಳಲ್ಲೂ ಶಾಲಾ ವಿದ್ಯಾರ್ಥಿಗಳಲ್ಲಿ ಬಾಪೂಜಿಯವರ ಸಂದೇಶಗಳನ್ನು ತಲುಪಿಸುವ ಕಾರ್ಯಕ್ಕೂ ಎ ಎಸ್ ಬಿ ಮುಂದಾಗಲಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401