ದಿನದ ಸುದ್ದಿ

‘ಮೈತ್ರಿ ಸೇತು’ ಸೇತುವೆಯ ವೈಶಿಷ್ಟ್ಯತೆ..!

Published

on

  • ಡಾ.ಗಿರೀಶ್ ಮೂಗ್ತಿಹಳ್ಳಿ

ಮಾನ್ಯ ಪ್ರಧಾನ ಮಂತ್ರಿಯವರಿಂದ ಇಂದು ಮಧ್ಯಾಹ್ನ ಉದ್ಘಾಟನೆಗೊಂಡ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ‘ಮೈತ್ರಿ ಸೇತು‘ ಸೇತುವೆಯ ವಿಶೇಷತೆಗಳು ಹೀಗಿವೆ;

  1. ಈ ಸೇತುವೆಯು 1.9 ಕಿ.ಮೀ. ಉದ್ದವಿದ್ದು ಭಾರತದ ಸಬ್ರೂಮ್ ಅನ್ನು ಬಾಂಗ್ಲಾದೇಶದ ರಾಯಗಢದೊಂದಿಗೆ ಬೆಸೆಯುತ್ತದೆ.
  2. ತ್ರಿಪುರ ರಾಜ್ಯದಲ್ಲಿರುವ ಭಾರತದ ಗಡಿ ಮತ್ತು ಬಾಂಗ್ಲಾದೇಶದ ನಡುವೆ ಹರಿಯುವ ‘ಫೆನಿ’ ನದಿಯ ಮೇಲೆ ನಿರ್ಮಿಸಲಾಗಿದೆ.
  3. ಸಬ್ರೂಮ್ ನಿಂದ ಕೇವಲ 80 ಕಿ.ಮೀ. ದೂರದ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ನೇರ ಸಂಪರ್ಕ ದೊರೆಯುತ್ತದೆ.
  4. ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಸಂಸ್ಥೆಯು 133 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.
  5. ಭಾರತ( ಈಶಾನ್ಯ ರಾಜ್ಯಗಳ) ಮತ್ತು ಬಾಂಗ್ಲಾದೇಶ ಎರಡು ದೇಶಗಳ ನಡುವಿನ ವ್ಯಾಪಾರ ಹಾಗೂ ಜನ ಸಂಚಾರಕ್ಕೆ ಹೊಸ ಅಧ್ಯಾಯ ಬರೆಯಲಿದೆ.
  6. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯ ಮತ್ತು ಸ್ನೇಹ ಸಂಬಂಧಗಳ ಸಂಕೇತವಾಗಿದೆ.
  7. ”ಈಶಾನ್ಯ ಮಹಾದ್ವಾರ’ವಾಗಿ ತ್ರಿಪುರ ಪರಿವರ್ತನೆಯಾಗಲಿದೆ.

(ಆಕರ: ಪಿಐಬಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version