ದಿನದ ಸುದ್ದಿ
ಮೆಕ್ಕೆಜೋಳಕ್ಕೆ ಲದ್ದಿಹುಳು ಬಾದೆ ; ಈ ಕೀಟನಾಶಕ ಸಿಂಪಡಿಸಿ
ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳಗಳ ಬಾದೆ ಹೆಚ್ಳಳವಾಗಿದ್ದು ನಿರ್ವಹಣೆಗೆ ಇಮಾಮ್ಯಾಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಅರ್ಧ ಗ್ರಾಂ ಬೆರೆಸಿ ಸುಳಿಯಲ್ಲಿ ತುಂಬುವಂತೆ ಸಿಂಪರಣೆ ಮಾಡಲು ತಿಳಿಸಲಾಗಿದೆ.
ಕೀಟಾ ನಾಶಕವು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಪರವಾನಿಗೆ ಪಡೆದ ಅಧಿಕೃತ ಕೃಷಿ ಪರಿಕರ ಮಾರಾಟಗಾರರಲ್ಲಿ ಕೂಡ ಲಭ್ಯವಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243