ದಿನದ ಸುದ್ದಿ

ಆಧುನಿಕ ತಂತ್ರಜ್ಞಾನದ ಸದ್ಬಳಕೆಯಿಂದ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ : ಸಚಿವ ಮನ್ಸೂಖ್ ಮಾಂಡವೀಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದೆಹಲಿ : ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಜನತೆ ಮುಂದಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಖ್ ಮಾಂಡವೀಯ ಹೇಳಿದ್ದಾರೆ.

ಬೊಜ್ಜು, ಸ್ಥೂಲಕಾಯ ಸಮಸ್ಯೆಗಳ ಕುರಿತು ಗುರುವಾರದಿಂದ ನಗರದಲ್ಲಿ ಆರಂಭವಾಗಿರುವ ಮೂರು ದಿನಗಳ ಅಂತಾರಾಷ್ಟ್ರೀಯ ತಜ್ಞ ವೈದ್ಯರ “ಒಸಿಕಾನ್ 2022” ಸಮ್ಮೇಳನವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.

ತಂತ್ರಜ್ಞಾನದಲ್ಲಿ ವ್ಯಾಪಕ ಅಭಿವೃದ್ಧಿಯಾಗುತ್ತಿದ್ದು, ದಿನನಿತ್ಯ ಬಗೆ ಬಗೆಯ ಸಂಶೋಧನೆಗಳು ನಡೆಯುತ್ತಿವೆ. ಇದರ ಜತೆ ಅನಾರೋಗ್ಯಕರ ಜೀವನ ಶೈಲಿಯೂ ಸಹ ಹೆಚ್ಚಾಗುತ್ತಿದೆ. ಹೀಗಿರುವಾಗ ತಂತ್ರಜ್ಞಾನ ಆರೋಗ್ಯಪೂರ್ಣ ಬದುಕಿಗೆ ನಾಂದಿಯಾಗಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಸ್ಥೂಲಕಾಯದವರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗಿತ್ತು. ಇದನ್ನು ಅಂಕಿ ಅಂಶಗಳೇ ದೃಢಪಡಿಸುತ್ತವೆ. ಹೀಗಾಗಿಯೇ ನಾವು ಸೂಕ್ತ ಆರೋಗ್ಯ ನಿರ್ವಹಣೆ, ಜೀವನ ಪದ್ಧತಿಯಲ್ಲಿ ಬದಲಾವಣೆ ಹೊಂದಬೇಕಾಗಿದೆ. ದಿನನಿತ್ಯ ವ್ಯಾಯಾಮಕ್ಕೆ ಒತ್ತು ನೀಡಬೇಕು. ಕಳವಳಕಾರಿ ಸಂಗತಿ ಎಂದರೆ ದೇಶದಲ್ಲಿ ಶೇಕಡ 31.6ರಷ್ಟು ಮಂದಿ ಸ್ಥೂಲಕಾಯದಿಂದ ಬಳಲುತ್ತಿದ್ದು, ಇದನ್ನು ನೋಡಿದರೆ ನಮ್ಮ ಮುಂದೆ ಇದು ಬಹುದೊಡ್ಡ ಸಮಸ್ಯೆಯಾಗಿ ನಿಂತಿದೆ. ಅಪಾಯದ ಗಂಟೆ ಬಾರಿಸುತ್ತಿದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346253

Trending

Exit mobile version