ದಿನದ ಸುದ್ದಿ

ಮೇಕ್ ಇನ್ ಇಂಡಿಯಾ ; ರಫ್ತು ಮಾರುಕಟ್ಟೆ ವಿಸ್ತರಣೆ : ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು

Published

on

ಸುದ್ದಿದಿನ, ಚೆನ್ನೈ : ವಿಶೇಷ ಆರ್ಥಿಕ ವಲಯದ ಜೊತೆಗೆ ಮೇಕ್ ಇನ್ ಇಂಡಿಯಾ ಹಾಗೂ ಸ್ಥಳೀಯ ವಸ್ತುಗಳ ಬಳಕೆಗೆ ಪ್ರೋತ್ಸಾಹಿಸುವ ಯೋಜನೆಗಳನ್ನು ರಫ್ತುದಾರರು ಬಳಕೆ ಮಾಡಿಕೊಂಡು ರಫ್ತು ಮಾರುಕಟ್ಟೆಯನ್ನು ವಿಸ್ತರಿಸಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಕರೆ ನೀಡಿದರು.

ಚೆನ್ನೈನಲ್ಲಿ ಮದ್ರಾಸ್ ಎಕ್ಸ್‌ಪೋರ್ಟ್ ಪ್ರೊಸೆಸಿಂಗ್ ವಿಭಾಗದ ಉತ್ಕೃಷ್ಠತಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕಳೆದ ಹಣಕಾಸು ವರ್ಷದಲ್ಲಿ 418ದಶಲಕ್ಷ ಡಾಲರ್ ವಹಿವಾಟು ಮಾಡಲಾಗಿತ್ತು. ಪ್ರಸ್ತುತ ೪ ತಿಂಗಳ ಅವಧಿಯಲ್ಲಿ 250 ದಶಲಕ್ಷ ಡಾಲರ್ ವಹಿವಾಟು ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ದೇಶದ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ರಫ್ತುದಾರರು ವಿಶ್ವದೆಲ್ಲೆಡೆ ಹೊಸ ಮಾರುಕಟ್ಟೆಯನ್ನು ಹೊಂದಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಂಕ್ರಾಮಿಕದ ನಡುವೆಯೂ ದೇಶದ ರಫ್ತು ಪ್ರಮಾಣ ಏರಿಕೆಯಾಗುವುದರ ಜೊತೆಗೆ ನೂತನ ಆವಿಷ್ಕಾರ ಮತ್ತು ತಂತ್ರಜ್ಞಾನ ಬಳಕೆಯಿಂದ ತಾಂತ್ರಿಕ ವಲಯದ ರಫ್ತು ಪ್ರಮಾಣ ಹೆಚ್ಚಳವಾಗಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ತಿಳಿಸಿದರು. ಕೇಂದ್ರ ಕೈಗಾರಿಕಾ ಖಾತೆ ರಾಜ್ಯ ಸಚಿವ ಅನುಪ್ರಿಯಾ ಸಿಂಗ್ ಪಟೇಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version