ಲೈಫ್ ಸ್ಟೈಲ್
ರೆಸಿಪಿ | ಮನೇಲೇ ಮಾಡ್ಕೊಳಿ ‘ರಸಂ ಪೌಡರ್’
ನೀವು ಮನೆಯಲ್ಲಿ ಸಿಂಪಲ್ಲಾಗಿ ‘ರಸಂ ಪೌಡರ್’ ಮಾಡಲು ಈ ಸಾಮಗ್ರಿಗಳು ಬೇಕು
- 1/4 ಕೆಜಿ ದನಿಯಾ
- 50 ಗ್ರಾಂ ಜಿರಿಗೆ
- 50 ಗ್ರಾಂ ಮೆಣಸು
- 50 ಗ್ರಾಂ ಮೆಂತ್ಯೆ ಕಾಳು
- 50 ಗ್ರಾಂ ಸಾಸಿವೆ
- ಒಂದು ಬಟ್ಟಲು ಕರಿಬೇವು ಸೊಪ್ಪು
1/4 ಕೆಜಿ ಒಣ ಮೆಣಸಿನ ಕಾಯಿ (150_ ಗ್ರಾಂ ಬ್ಯಾಡಗಿ ಮೆಣಸಿನ ಕಾಯಿ, 100 ಗ್ರಾಂ ಗುಂಟೂರು ಮೆಣಸಿನ ಕಾಯಿ )
ಮಾಡುವ ವಿಧಾನ
ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ ಎಲ್ಲವನ್ನು ಬೇರೆ ಬೇರೆಯಾಗಿ ಮಂದ ಉರಿಯಲ್ಲಿ ಹುರಿದು ಕೊಳ್ಳ ಬೇಕು.ಆರಿ ತಣ್ಣಗಾದ ಮೇಲೆ ಎಲ್ಲವನ್ನು ಸೇರಿಸಿ ಮನೆಯಲ್ಲಿಯೆ ಮಿಕ್ಸಿಮಾಡಬಹುದು. ಒಂದೆರಡು ತಿಂಗಳು ಬರುತ್ತೆ.ಪೌಡರ ಫ್ರೆಶ್ ಆಗಿದ್ದರೆ ರಸಂ ಚನ್ನಾಗಿರುತ್ತದೆ. ರಸಂ ಮಾಡುವಾಗ ರಸಂ ಪೌಡರಿಗೆ ಸ್ವಲ್ಪ ಕಾಯಿ ತುರಿ ಕೊತ್ತಂಬರಿ ಸೊಪ್ಪು ಮಿಕ್ಸಿಯಲ್ಲಿ ನುಣ್ಣಗೆ ಮಾಡಿ ಟಮೊಟೊ ರಸಂ,ಬೇಳೆ ರಸಂಗೆ ಹಾಕಿ ಇಂಗು ಜಿರಿಗೆ ಒಗ್ಗರಣೆ ಅಥವಾ ಬೆಳುಳ್ಳಿಯ ಒಗ್ಗರಣೆ ಕೊಡ ಬೇಕು.