ದಿನದ ಸುದ್ದಿ

‘ಮಲೆ ಮಹದೇಶ್ವರ ಬೆಟ್ಟ ದತ್ತು ಪಡೆದ ಡಿ ಬಾಸ್’ ಗೆ ಕರುನಾಡ ಜನತೆ ಉಘೇ ಉಘೇ ಅಂದ್ರು..!

Published

on

ಸುದ್ದಿದಿನ ಡೆಸ್ಕ್ : ಇವರಿಗೆ ಪ್ರಾಣಿಗಳ ಮೇಲೆ ಅಪಾರವಾದ ಪ್ರೀತಿ. ಮೈಸೂರು ಮೃಗಾಲಯದಿಂದ ಇತ್ತೀಚೆಗಷ್ಟೇ ಹುಲಿ ಮತ್ತು ಆನೆಯನ್ನು ದತ್ತು ಪಡೆದಿದ್ದು, ಸ್ನೇಹಿತರಿಗೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಇಷ್ಟಕ್ಕೇ ಇವರ ಪರಿಸರದ ಮತ್ತು ಪ್ರಾಣಿಗಳ ಮೇಲಿನ ಪ್ರೀತಿ ಸೀಮಿತವಾಗಿರುವುದಿಲ್ಲ. ದರ್ಶನ್ ಇವೆಲ್ಲದರ ನಡುವೆ ಒಂದು ಹೆಜ್ಜೆ ಮುಂದಿಟ್ಟಿದ್ದು ಇಡೀ ಕಾಡನ್ನೇ ದತ್ತು ಪಡೆದಿದ್ದಾರೆ. ಅದೇ ಮಲೆ ಮಹದೇಶ್ವರ ಬೆಟ್ಟ. ಈ ಬೆಟ್ಟವನ್ನು ದತ್ತು ಪಡೆದಿರುವ ಇವರು ಇದರ ಸರ್ವತೋಮುಖ ಅಭಿವೃದ್ಧಿಗೆ ಮನಸ್ಸುಮಾಡಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರು ತಮ್ಮ ಕರ್ತವ್ಯಗಳನ್ನು ತುಂಬಾ ಜವಾಬ್ದಾರಿಯುತವಾಗಿ ನಡೆಸುತ್ತಿದ್ದು ಹಾಗಂ ಶೂಟಿಂಗ್ ಗೂ ಕೂಡ ತಪ್ಪಿಸಿಕೊಳ್ಳದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸಾಮಾಜಿಕ ಕಾರ್ಯಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಕರುನಾಡ ಜನತೆ ಉಘೇ ಉಘೇ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version