ದಿನದ ಸುದ್ದಿ
ಝಾಕಿರ್‌ನನ್ನು ಭಾರತಕ್ಕೊಪ್ಪಿಸಲು ಒಲ್ಲೆ ಎಂದ ಮಲೇಷ್ಯಾ
ಸುದ್ದಿದಿನ ಡೆಸ್ಕ್ : ವಿವಾದಿತ ಇಸ್ಲಾಂ ಪ್ರಚಾರಕ ಹಾಗೂ ದ್ವೇಷ ಭಾಷಣ ಮಾಡಿದ ಆರೋಪ ಹೊತ್ತಿರುವ ಝಾಕಿರ್ ನಾಯಕ್‌ರನ್ನು ಭಾರತದ ವಶಕ್ಕೊಪ್ಪಿಸಲು ಮಲೇಷ್ಯಾ ಸರಕಾರ ನಿರಾಕರಿಸಿದೆ. ಈ ಕುರಿತು ಮಲೇಷ್ಯಾ ಪ್ರಧಾನಿ ಮಹದಿರ್ ಮೊಹಮದ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಉಗ್ರವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಭಾರತದ ವಾಂಟೆಡ್ ಲಿಸ್ಟ್‌ನಲ್ಲಿರುವ ಝಾಕಿರ್ ನಾಯಕ್ ಅವರು 2016ರಲ್ಲಿ ಭಾರತ ಬಿಟ್ಟು ಮಲೇಷ್ಯಾ ಸರಕಾರದ ಆಶ್ರಯ ಪಡೆದಿದ್ದರು. ಮಲೇಷ್ಯಾದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿರುವ ನಗರವೊಂದರಲ್ಲಿ ವಾಸಿಸಲು ಅವರು ಅನುಮತಿ ಪಡೆದಿದ್ದರು.
ಝಾಕಿರ್ ನಾಯಕ್‌ನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಭಾರತವು ಕಳೆದ ಜನವರಿಯಲ್ಲಿ ಮಲೇಷ್ಯಾ ಸರಕಾರವನ್ನು ಕೋರಿತ್ತು. ಈ ಸಂಬಂಧ ಉಭಯ ರಾಷ್ಟ್ರಗಳು ಒಂದು ನಿರ್ಧಾರಕ್ಕೆ ಬಂದಿವೆ. ಝಾಕಿರ್ ನಾಯಕ್‌ನಿಂದ ಭಾರತದಲ್ಲಿ ಯಾವುದಾದರೂ ಸಮಸ್ಯೆ ಉದ್ಭವಿಸಿದರೆ ಮಾತ್ರ ಆತನನ್ನು ತವರಿಗೆ ಕಳುಹಿಸಿಕೊಡುವುದಾಗಿ ಮಲೇಷ್ಯಾ ಸರಕಾರ ತಿಳಿಸಿದೆ. ಝಾಕಿರ್ ನೀಡಿರುವ ದ್ವೇಷ ಭಾಷಣದಿಂದ ಮುಸ್ಲಿಂ ಸಮುದಾಯದ ಹಲವು ಯುವಕರು ಉಗ್ರಗಾಮಿಗಳಾಗಿ ಪರಿವರ್ತಿತಗೊಂಡಿದ್ದಾರೆ ಎಂದು ಭಾರತ ಸರಕಾರ ತಿಳಿಸಿದೆ. ಆದರೆ, ಮಲೇಷ್ಯಾ ಸರಕಾರ ಇದನ್ನು ತಳ್ಳಿಹಾಕಿದೆ.
52 ವರ್ಷದ ಝಾಕಿರ್ ನಾಯುಕ್ ಅವರು ಭಾರತಕ್ಕೆ ವಾಪಸ್ ಬರಬಹುದೆಂದು ಮಾಧ್ಯಮಗಳು ಈಚೆಗೆ ವರದಿ ಮಾಡಿದ್ದವು. ಆದರೆ, ಅದನ್ನು ಖುದ್ದು ಝಾಕಿರ್ ಅವರೇ ತಳ್ಳಿಹಾಕಿದ್ದು, ಇದೊಂದು ಶುದ್ದ ಸುಳ್ಳು ವರದಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401