ಲೈಫ್ ಸ್ಟೈಲ್
ಲೈಂಗಿಕ ಕ್ರಿಯೆ ಮುಗಿದ ತಕ್ಷಣ ಹೊಟ್ಟೆ ಒಡೆದು ಸಾಯುವ ಗಂಡು ಇರುವೆಗಳು; ತಮ್ಮ ಸಂತಾನಕ್ಕಾಗಿ, ಪ್ರಾಣ ತ್ಯಜಿಸಲು ಹಿಂಜರಿಯುವುದಿಲ್ಲ…!
ಈ ಭೂಮಿಯ ಮೇಲೆ ಇರುವೆಗಳಿಲ್ಲದ ಜಾಗವಿಲ್ಲ. ಎಲ್ಲೇ ಒಂದು ಬಿರುಕು ಕಾಣಿಸಿದರೂ ಅಲ್ಲಿ ಇರುವೆಗಳು ಸೇರಿಕೊಂಡು ಬಿಡುತ್ತವೆ. ಪ್ರತಿಯೊಂದು ಜೀವಿಯೂ ತನ್ನ ಸಂತಾನ ಅಭಿವೃದ್ಧಿ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ನಮ್ಮ ಕಣ್ಣಿಗೆ ಕಾಣುವ ಅತಿ ಸಣ್ಣದಾದ ಇರುವೆಯೂ ಸಹ ತನ್ನ ಸಂತಾನ ಅಭಿವೃದ್ಧಿಗಾಗಿ ಲೈಂಗಿಕ ಕ್ರಿಯೆ ನಡೆಸುತ್ತದೆ ಎಂದರೆ ಅಚ್ಚರಿಯಾಗುತ್ತದಲ್ಲವೇ.ಬನ್ನಿ ಇದರ ಬಗ್ಗೆ ತಿಳಿಯೋಣ….
ಇರುವೆಗಳು ಮಾನವನ ಹುಟ್ಟಿಗಿಂತಲೂ ಮೊದಲೇ ಅಸ್ಥಿತ್ವದಲ್ಲಿ ಇದ್ದವೆಂದು ಹೇಳಲಾಗಿದೆ. ಡೈನೋಸಾರ್ ಕಾಲದಿಂದಲೇ ಇರುವೆಗಳು ಇದ್ದವಂತೆ. ಈ ವಿಶ್ವದಲ್ಲಿ 12,500 ಪ್ರಬೇಧಗಳ ಇರುವೆಗಳು ಇವೆಯಂತೆ ಅವುಗಳಲ್ಲಿ 2,500 ಪ್ರಬೇಧಗಳನ್ನು ಮಾತ್ರ ಗುರುತಿಸಲಾಗಿದೆಯಂತೆ. ಅತಿ ಶೀತ ಪ್ರದೇಶಗಳಲ್ಲಿ ಇರುವೆಗಳು ವಾಸಿಸುವುದಿಲ್ಲ. 5 ಸೆಂಟಿಮೀಟರ್ ಉದ್ದದ ಇರುವೆಗಳನ್ನೂ ನಾವು ನೊಡ ಬಹುದು.
ಅತ್ಯಂತ ದೊಡ್ಡ ಗಾತ್ರದ ಇರುವೆಗಳನ್ನು’ ಕ್ವೀನ್ಸ್’ ಎಂದು ಕರೆಯುತ್ತಾರೆ. ಇವು 5 ರಿಂದ 6 ಸೆಂಟಿ ಮೀಟರ್ ಉದ್ದವಾಗಿರುತ್ತವೆ. ಇರುವೆಗಳು ಯಾವಾಗಲೂ ಗುಂಪುಗಳಲ್ಲಿ ವಾಸಿಸುತ್ತವೆ. ಈ ಗುಂಪುಗಳನ್ನು ಕಾಲೊನೀಸ್ ಎಂದು ಕರೆಯುತ್ತಾರೆ.ಪ್ರತೀ ಗುಂಪಿನಲ್ಲಿ ಲೈಂಗಿಕ ಸಾಮರ್ಥ್ಯವಿರುವ ಗಂಡು ಹಾಗೂ ಹೆಣ್ಣು ಇರುವೆಗಳಿರುತ್ತವೆ. ಗಂಡು ಇರುವೆಗಳನ್ನು ‘ಡ್ರೋಮ್ಸ್ ‘ಎಂದು ಹೆಣ್ಣು ಇರುವೆಗಳನ್ನು ‘ಕ್ವೀನ್ಸ್’ ಎಂದು ಕರೆಯುತ್ತಾರೆ. ಇರುವೆಗಳ ಲೈಂಗಿಕ ಕ್ರಿಯೆ ಬಹಳ ಆಕರ್ಷಕವಾಗಿರುತ್ತದೆ. ಇರುವೆಗಳು ಗಾಳಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸುತ್ತವೆ. ಇರುವೆಗಳು ಹಾರುತ್ತವೆಂದರೆ… ಅಚ್ಚರಿಯಾಗುತ್ತದಲ್ಲವೇ? ಹೌದು. ಡ್ರೋಮ್ಸ್ ಹಾಗು ಕ್ವೀನ್ಸ್ ಇರುವೆಗಳು ರೆಕ್ಕೆಗಳನ್ನು ಹೊಂದಿರುತ್ತವೆ. ಇವು ಗುಂಪಿನಲ್ಲಿರುವಾಗ ಲೈಂಗಿಕ ಕ್ರಿಯೆಯನ್ನು ನಡೆಸುವುದಿಲ್ಲ. ಲೈಂಗಿಕ ಕ್ರಿಯೆ ನಡೆಸುವಾಗ ಗಂಡು ತನ್ನ ವೀರ್ಯಾಣುಗಳನ್ನು ಬಿಡುಗಡೆ ಮಾಡುತ್ತದೆ .
ನಂತರ ಸುಮಾರು 25-30 ವರ್ಷಗಳ ಅವಧಿಗೆ, ಸಂತಾನ ಅಭಿವೃದ್ಧಿಪಡಿಸಲು ಹೆಣ್ಣಿಗೆ ವೀರ್ಯಾಣುಗಳ ಅವಶ್ಯಕತೆ ಇರುವುದಿಲ್ಲ. ವೀರ್ಯವನ್ನು ಸ್ಖಲಿಸಿದ ನಂತರ ಗಂಡು ಇರುವೆಗಳ ಹೊಟ್ಟೆಯೊಳಗಿನ ಅವಯವಗಳು ಸಿಡಿದು ,ಗಂಡು ಇರುವೆ ಮರಣ ಹೊಂದುತ್ತದೆ. ನಂತರದ ದಿನಗಳಲ್ಲಿ ಹೆಣ್ಣು ಇರುವೆ ಒಂದು ಗೂಡಿನಲ್ಲಿ ಮೊಟ್ಟೆಗಳನ್ನು ಇರಿಸುತ್ತದೆ. ಈ ಮೊಟ್ಟೆಗಳನ್ನು ಸೈನಿಕ ಇರುವೆಗಳು ಕಾಪಾಡುತ್ತವೆ. ಮೊಟ್ಟೆಗಳು ಒಡೆದು ಇರುವೆಗಳು ಹೊರ ಬಂದ ನಂತರ ಅವುಗಳಲ್ಲಿ ಕೆಲವೇ ಕೆಲವು ಇರುವೆಗಳು ಮಾತ್ರ ಲೈಂಗಿಕ ಸಾಮರ್ಥ್ಯ ಹೊಂದಿರುವ ಗಂಡು ಹಾಗು ಹೆಣ್ಣು ಇರುವೆಗಳು ಇರುತ್ತವೆ.
ಇರುವೆಗಳ ಲೈಂಗಿಕ ಕ್ರಿಯೆ ನಿಗಧಿತ ವಾತವರಣದಲ್ಲಿ ಮಾತ್ರ ನಡೆಯುತ್ತದೆನ್ನುವುದು ಗಮನಾರ್ಹ ವಿಷಯ. ಆ ಸಮಯದಲ್ಲಿ ಹೆಣ್ಣು ಹಾಗೂ ಗಂಡು ಇರುವೆಗಳು ಸೂಕ್ತ ಸ್ಥಳವನ್ನು ಹುಡುಕಿಕೊಂಡು ಹಾರಾಡುತ್ತಿರುತ್ತವೆ 2009 ರಲ್ಲಿ ಆಫ್ರಿಕಾ ದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಸಮಯದಲ್ಲಿ, ಹೀಗೆ ಹಾರಾಡುತ್ತಿದ್ದ ಇರುವೆಗಳ ಗುಂಪಿನಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾಗಿದ್ದು ನಿಮಗೆ ನೆನಪು ಇದ್ದೇ ಇರುತ್ತದೆ.
(ಸಂಗ್ರಹ)