ದಿನದ ಸುದ್ದಿ
ಮಲೆಬೆನ್ನೂರು | ಒಡೆಯರ ಬಸಾಪುರದ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ; ಸಿಂಚನ ಕೆ.ಪಿ ಗೆ 615 ಅಂಕ
ಸುದ್ದಿದಿನ,ಮಲೇಬೆನ್ನೂರು : ಪಟ್ಟಣದ ಜಿಗಳಿ ರಸ್ತೆಯ ಗ್ರಾಮೀಣ ಪ್ರದೇಶವಾದ ಒಡೆಯರ ಬಸಾಪುರ ಗ್ರಾಮದ ಶ್ರೀ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಗೆ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಕುಳಿತ ಒಟ್ಟು 21 ವಿದ್ಯಾರ್ಥಿಗಳಲ್ಲಿ ಸಿಂಚನ ಕೆ.ಪಿ 615ಅಂಕಗಳೊಂದಿಗೆ ಶೇ.95 ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಭೂಮಿಕ ಕೆ.ಜೆ – 599 ( 96 % ), ಕೃಪಾ ಯು.ಆರ್ – 586 ( 94 % ), ದೈವಿಕ್ ಜಿ.ಎಸ್ – 585( 94 % ), ಚಂದನ ಬಿ.ಎಂ – 569 ( 92%), ಪವನ್ ಕುಮಾರ್ ವಿ – 562 ( 90% ) ಗಳಿಸುವ ಮೂಲಕ ಶಾಲೆಗೆ ಗೌರವದ ಗರಿ ಮೂಡಿಸಿದ್ದಾರೆ,
ಉಳಿದಂತೆ ಫಾತಿಮಾ ಐಮನ್ – ಶೇ 88, ಪ್ರವೀಣ್ ಕುಮಾರ್ ಎಂ.ಪಿ – ಶೇ 84, ಉಲ್ಲಾಸ್ ಎಂ.ಎಸ್ – ಶೇ82 , ಭುವನ್ ಜಿ.ಕೆ – ಶೇ 82, ಪವನ್ ಎಂ.ಹೆಚ್ – ಶೇ 81, ಅನನ್ಯ ಜಿ.ಎಸ್ – ಶೇ 80, ಹರ್ಷಿತ ಓ.ಜಿ – ಶೇ 80 ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ.
ಉತ್ತಮ ಫಲಿತಾಂಶದೊಂದಿಗೆ ಕೀರ್ತಿ ತಂದಿರುವ ತಮ್ಮ ಶಾಲೆಯ ಎಲ್ಲಾ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಶ್ರೀ ಜಿ.ಬಿ ಶಿವಾನಂದಪ್ಪ, ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಮುಖ್ಯೋಪಾಧ್ಯಾಯರಾದ ಶಶಿಧರ್ ಎಸ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಅಭಿನಂದಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243