ದಿನದ ಸುದ್ದಿ

ಮಲೆಬೆನ್ನೂರು | ಎಸ್ ಎಸ್ ಎಲ್ ಸಿ ಫಲಿತಾಂಶ : ನಿದಾಸಮ್ರಿನ್ ಗೆ 600 ಅಂಕ

Published

on

ಸುದ್ದಿದಿನ,ಮಲೇಬೆನ್ನೂರು:ಪಟ್ಟಣದ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಿದಾಸಮ್ರಿನ್ ಆರ್. ಕೆ. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಅಂಕದೊಂದಿಗೆ ಶೇ. 96 ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಮೊದಲ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಮಲೇಬೆನ್ನೂರು ನಿವಾಸಿ ರಫೀವುಲ್ಲಾ ಖಾಜಿ ಹಾಗೂ ಶ್ರೀಮತಿ ಸಬಿಹಾಬಾನು ದಂಪತಿಗಳ ಪುತ್ರಿಯಾದ ನಿದಾಸಮ್ರಿನ್ ಕನ್ನಡದಲ್ಲಿ 123, ಇಂಗ್ಲೀಷ್ ನಲ್ಲಿ 98, ಹಿಂದಿ 98, ಗಣಿತ 89, ವಿಜ್ಞಾನ 92 ಹಾಗೂ ಸಮಾಜದಲ್ಲಿ 100 ಕ್ಕೆ 100 ಅಂಕದೊಂದಿಗೆ 625 ಕ್ಕೆ ಒಟ್ಟು 600 ಅಂಕ ಗಳಿಸಿದ್ದಾರೆ.

ಮೊದಲಿಗಳಾಗಿ ಶಾಲೆಗೆ ಕೀರ್ತಿ ತಂದಿರುವ ಈ ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಕಾರ್ಯದರ್ಶಿ ಶಿವಾನಂದಪ್ಪ , ಮುಖ್ಯೋಪಾಧ್ಯಾಯ ಶಶಿಧರ್ ಎಸ್, ತಂದೆ, ತಾಯಿ, ದೊಡ್ಡಪ್ಪ ಸನಾವುಲ್ಲಾ ಖಾಜಿ , ಕಡೂರ ಖಾಜಿ ವಂಶಸ್ಥರು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version