ದಿನದ ಸುದ್ದಿ
ಮಲೇಬೆನ್ನೂರು ರಾಜ ರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್
ಸುದ್ದಿದಿನ,ಮಲೇಬೆನ್ನೂರು : ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ್ ಬಸಾಪುರ ಗ್ರಾಪಂ ವ್ಯಾಪ್ತಿಯ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಂದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಹಾಕಲಾಯಿತು.
ಸ್ಥಳೀಯ ಆರೋಗ್ಯ ಕೇಂದ್ರದ ಸುಶ್ರೂಷಕಿ ಶ್ರೀಮತಿ ವಿಮಲಾಶೀಲಾ ಶಾಲೆಯ 7,8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ 1 ನೇ ಡೋಸ್ ಪಡೆದವರಿಗೆ 2 ನೇ ಹಾಗೂ ಈವರೆಗೂ ಪಡೆಯದಿದ್ದವರಿಗೆ 1 ನೇ ಡೋಸ್ ವ್ಯಾಕ್ಸಿನ್ ನೀಡಿದರು. ಆಶಾ ಕಾರ್ಯಕರ್ತರಾದ ಶ್ರೀಮತಿ ಆಶಾ ಮತ್ತು ಶ್ರೀಮತಿ ಜ್ಯೋತಿ ಸಹಕರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಜಿ.ಬಿ ಶಿವಾನಂದಪ್ಪ, ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಮುಖ್ಯೋಪಾಧ್ಯಾಯರಾದ ಶಶಿಧರ್ ಎಸ್ ಹಾಗೂ ಶಿಕ್ಷಕರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243